ಬಂಟ್ವಾಳ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ – ಮಾವಿನಕಟ್ಟೆ-ಸರಪಾಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ 2 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮಾವಿನಕಟ್ಟೆ-ಸರಪಾಡಿ ರಸ್ತೆ ಕಾಮಗಾರಿಗೆ ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.

“ ಮಾವಿನಕಟ್ಟೆ-ಸರಪಾಡಿ ರಸ್ತೆ ಅಭಿವೃದ್ಧಿಯ ಜತೆಗೆ ಶೀಘ್ರದಲ್ಲಿ ಸರಪಾಡಿ-ಬೀಯಪಾದೆ ರಸ್ತೆ ಅಭಿವೃದ್ಧಿಯ ಬೇಡಿಕೆಯೂ ಈಡೇರಲಿದೆ. ದೇವಸ್ಥಾನದ ರಥಬೀದಿಯ ಕಾಂಕ್ರೀಟ್ ಕಾಮಗಾರಿಯೂ ನಡೆಯಲಿದೆ. ದೇವಸ್ಥಾನಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ಬಹಳ ವರ್ಷಗಳ ಬೇಡಿಕೆಯಾಗಿದ್ದು, ಇಡೀ ಬಂಟ್ವಾಳ ಕ್ಷೇತ್ರದಲ್ಲಿ ದೇವಸ್ಥಾನ ಸಂಪರ್ಕ ರಸ್ತೆಗಳನ್ನು ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ” ಎಂದರು.

ಈ ಸಂದರ್ಭದಲ್ಲಿ ಶಾಸಕರು ಸರಪಾಡಿ-ಬೀಯಪಾದೆ ರಸ್ತೆಯ 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಕಾಮಗಾರಿ ಹಾಗೂ ಸರಪಾಡಿ-ಮಠದಬೆಟ್ಟು ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಉದ್ಘಾಟಿಸಿದರು. ಸರಪಾಡಿ ಗ್ರಾಮ ಪಂಚಾಯತ್  ಅಧ್ಯಕ್ಷೆ ಲೀಲಾವತಿ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್  ಸದಸ್ಯ ದಿನೇಶ್ ಗೌಡ ನೀರೊಲ್ಬೆ, ಉಳಿ ಗ್ರಾಮ ಪಂಚಾಯತ್  ಅಧ್ಯಕ್ಷ ಸುರೇಶ್ ಮೈರ, ಮಣಿನಾಲ್ಕೂರು ಗ್ರಾಮ ಪಂಚಾಯತ್  ಸದಸ್ಯ ಪುರುಷೋತ್ತಮ ಪೂಜಾರಿ ಮಜಲು, ಸಾಂತಪ್ಪ ಪೂಜಾರಿ ಹಟ್ಟದಡ್ಕ, ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಕುಸುಮಾಕರ ಶೆಟ್ಟಿ ಕುರ್ಯಾಳ, ಗುತ್ತಿಗೆದಾರ ಸುಧಾಕರ್ ಶೆಟ್ಟಿ ಮುಗ್ರೋಡಿ, ಪಿಎಂಜಿಎಸ್‌ವೈ ಎಂಜಿನಿಯರ್ ಪ್ರಸನ್ನ ಸುದರ್ಶನ್ ಬಜ, ಶಶಿಕಾಂತ್ ಶೆಟ್ಟಿ ಆರುಮುಡಿ, ನಾರಾಯಣ ಶೆಟ್ಟಿ ಹೊಳ್ಳರಗುತ್ತು, ರಾಜೇಂದ್ರ ಕಡಮಾಜೆ, ರವೀಂದ್ರ ಶೆಟ್ಟಿ ಕೈಯಾಳ, ವಿಠಲ್ ಎಂ, ಜಯರಾಮ ಅಡಪ, ನಿಶಾಂತ್ ಶೆಟ್ಟಿ ಕುಕ್ಕಿಲ, ವಸಂತ ಪೂಜಾರಿ ಡೆಚ್ಚಾರು, ಶಿವರಾಮ ಭಂಡಾರಿ, ಗಿರಿಧರ ಎಸ್, ಜೋಕಿಂ ಪಿಂಟೊ ಉಪಸ್ಥಿತರಿದ್ದರು.ಸರಪಾಡಿ ಗ್ರಾಮ ಪಂಚಾಯತ್  ಸದಸ್ಯ ಎನ್.ಧನಂಜಯ ಶೆಟ್ಟಿ ಸರಪಾಡಿ ಸ್ವಾಗತಿಸಿ, ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
NEWSDESK