ಬಂಟ್ವಾಳ

ಸಂತ ಶ್ರೀ ಸೇವಾಲಾಲ ಜಯಂತಿ ಆಚರಣೆ

ಬಂಟ್ವಾಳ: “ತನ್ನ ಪವಾಡಗಳ ಮೂಲಕ ಜನರನ್ನು ಪರಿವರ್ತಿಸಲು ಪ್ರಯತ್ನಪಟ್ಟವರು ಸಂತ ಶ್ರೀ ಸೇವಾಲಾಲರು. ಅಲೆಮಾರಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯದವರನ್ನು ಉದ್ಧರಿಸಿ ಅವರಿಗೆ ಸಮಾಜದಲ್ಲಿ ವಿಶೇಷ ಸ್ಥಾನ ಕಲ್ಪಿಸಿಕೊಟ್ಟರು”  ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ.ಎಸ್.ಆರ್ ಅವರು ಹೇಳಿದರು. ಅವರು ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ) ಮಂಗಳೂರು ಇದರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೆ ಹೆಚ್, ನಿಕಟ ಪೂರ್ವ ಜಂಟಿ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ್, ಸಲಹಾ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ನಾಯಕ್, ಕಲ್ಲುದೇನು ಲಮಾಣಿ, ಲೋಕಾ ನಾಯ್ಕ್, ದಿಲೀಪ್ ಕುಮಾರ್ ರಜಪೂತ್ ಹಾಗೂ ಸಂಘದ ಸದಸ್ಯರಾದ ತಾರೇಶ್ ನಾಯ್ಕ್, ವಿಜಯಲಕ್ಷ್ಮಿ ಬಾಯಿ, ಹೀರ್ಯಾ ನಾಯ್ಕ್, ಜ್ಯೋತಿ ಬಾಯಿ, ರಾಜು ಲಮಾಣಿ, ವಿಶ್ವನಾಥ ರಾಥೋಡ್, ಕಿರಣ್ ಕುಮಾರ್ ಡಿ ರಜಪೂತ್, ಗೌತಮಿ ನಾಯಕ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್,ತಾಲೂಕು ಕಚೇರಿ ಸಿಬಂದಿಗಳು,ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ  ಸಾರ್ವಜನಿಕರು ಉಪಸ್ಥಿತರಿದ್ದರು.

ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

NEWSDESK

Recent Posts