ಬಂಟ್ವಾಳ

ವೀರ ವಿಠ್ಠಲ ದೇವರಿಗೆ ಶತ ಕಲಶಾಭಿಷೇಕ

ಪಾಣೆಮಂಗಳೂರು : ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನ ಪಾಣೆಮಂಗಳೂರು ನಲ್ಲಿ ಇಂದು ಶುಕ್ರವಾರ ಶ್ರೀ ದೇವರ ಪ್ರೀತ್ಯರ್ಥ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ಜರಗಿತು ಬಳಿಕ ಹತ್ತು ಸಮಸ್ತರ ಪರವಾಗಿ ಶ್ರೀದೇವರಿಗೆ ಸ್ವರ್ಣ ಮಾಲೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಿ . ರಘುವೀರ್ ಭಂಡಾರ್ಕಾರ್ , ವಿಶ್ವನಾಥ್ ಶೆಣೈ , ಪ್ರಭಾಕರ್ ಪೈ , ಉದ್ಯಮಿ ಡಾ . ಎಂ . ಜಗನ್ನಾಥ್ ಶೆಣೈ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು . 

 

NEWSDESK

Recent Posts