ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದದ ಸಂಕಲ್ಪ ಎಂಬ ಘೋಷ ವಾಕ್ಯದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಮಂಗಳವಾರ ಮಾನವ ಸರಪಳಿಯು ಬಿ.ಸಿ.ರೋಡಿನ ಕೈಕಂಬ ಪೂಂಜಾ ಮೈದಾನದಲ್ಲಿ ಜರಗಿತು.
ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಮನೆಯಿಂದ ಮೈದಾನದ ತನಕ ಸೌಹಾರ್ದ ಕಾಲ್ನಡಿಗೆ ಜಾಥ ನಡೆಯಿತು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸೆಯ್ಯೆದ್ ಅಮೀರ್ ತಂಙಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್, ಸಯ್ಯದ್ ಝೈನುಲ್ ಆಭಿದೀನ್ ತಂಙಳ್ ಬೆಳ್ತಂಗಡಿ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಸಯ್ಯದ್ ಫಕ್ರುದ್ದೀನ್ ತಂಙಳ್ ತಾಣೂರು, ಯುವ ವಾಗ್ಮಿ ಇಕ್ಬಾಲ್ ಬಾಳಿಲ ಮುಖ್ಯ ಪ್ರಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಮಾನವ ಸರಪಳಿ ನಡೆಸಿ ಸೌಹಾರ್ದದ ಪ್ರತಿಜ್ಞೆ ಮಾಡಿದರು. ಅಲ್ಪಸಂಖ್ಯಾತ ಅನುದಾನ ಕಡಿತವನ್ನು ವಿರೋಧಿಸಿ, ಮತ್ತು ರೈತರ ಹೋರಾಟಕ್ಕೆ ನ್ಯಾಯ ಓದಗಿಸುವಂತೆ ನಿರ್ಣಯ ಮಂಡಿಸಲಾಯಿತು. ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಕಾರ್ಯದರ್ಶಿ ಖಾಸಿಂ ದಾರಿಮಿ, ಬಂಟ್ವಾಳ ಪುರಸಭೆ ಅಧ್ಯಕ್ಷ ಶರೀಫ್ ಶಾಂತಿಯಂಗಡಿ, ಮಿತ್ತಬೈಲ್ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಬಂಟ್ವಾಳ ವಲಯ ಅಧ್ಯಕ ಇರ್ಷಾದ್ ದಾರಿಮಿ ಮಿತ್ತಬೈಲ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಅಶ್ರಫ್ ಫೈಝಿ ಮಿತ್ತಬೈಲ್, ಉಮರುಲ್ ಫಾರೂಖ್ ಫೈಝಿ, ಡಾಕ್ಟರ್ ಶಕೀಲ್, ಟಿ.ಎಂ.ಶಹೀದ್, ಹಸೈನರ್ ತಾಳಿಪಡ್ಪು ಮೊದಲಾದ ಸಾಮಾಜಿಕ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಖಾಯ ಕಾರ್ಯಕರ್ತರು ಸ್ವಯಂಸೇವಕರಾಗಿ ಕಾರ್ಯನಿವಾಹಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಸ್ವಾಗತಿಸಿ, ರಶೀದ್ ರಹ್ಮಾನಿ ವಂದಿಸಿದರು.