ಬಂಟ್ವಾಳ

ಧರ್ಮದ ಅಪಮಾನ ತಡೆಯಲು ಪ್ರತ್ಯೇಕವಾದ ಧರ್ಮನಿಂದನಾ ವಿರೋಧಿ ಕಾಯಿದೆ ತರುವಂತೆ ಒತ್ತಾಯಿಸಿ ಮನವಿ

ಬಂಟ್ವಾಳ: ಧರ್ಮದ ಅಪಮಾನವನ್ನು ತಡೆಯಲು ಪ್ರತ್ಯೇಕವಾದ ಧರ್ಮನಿಂದನಾ ವಿರೋಧಿ ಕಾಯಿದೆ ತರುವಂತೆ ಒತ್ತಾಯಿಸಿ ಬಂಟ್ವಾಳ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಹಿಂದು ಜನಜಾಗೃತಿ ಸಮಿತಿ ಮನವಿ ಮಾಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಧಾಕೃಷ್ಣ, ಪಾಲಾಕ್ಷ, ಕಿರಣ್, ಲತೇಶ್ ಬಿಸಿ ರೋಡ್, ಮನೋಜ್ ವಿಟ್ಲ, ಪ್ರಜ್ವಲ್ ವಿಟ್ಲ, ಚೇತನ್ ವಿಟ್ಲ ಉಪಸ್ಥಿತರಿದ್ದರು.

ಭಾರತೀಯ ಸಮಾಜವು ಧರ್ಮಚರಣಿ, ಆಸ್ತಿಕ ಮತ್ತು ಧರ್ಮನಿಷ್ಠವಾಗಿದೆ. ಭಾರತೀಯ ಸಂವಿಧಾನವು ಸಹ ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಯೊಬ್ಬರು ಧರ್ಮಕ್ಕೆ ಗೌರವ ಸೂಚಿಸುವುದನ್ನು ಕಲಿಸುತ್ತದೆ. ಆದರೆ ಇಂದು, ನಾಟಕಗಳು, ಚಲನಚಿತ್ರಗಳು, ವೆಬ್ ಸಿರೀಸ್‌ಗಳು, ಜಾಹೀರಾತುಗಳು, ಕವನಗಳು, ಚಿತ್ರಗಳು ಇತ್ಯಾದಿಗಳ ಮೂಲಕ ಹಿಂದೂ ಧರ್ಮ, ಧರ್ಮಗ್ರಂಥಗಳು, ದೇವತೆಗಳು, ಸಂತರು ಮತ್ತು ರಾಷ್ಟ್ರಪುರುಷರನ್ನು ದೊಡ್ಡ ಪ್ರಮಾಣದಲ್ಲಿ ವಿಡಂಬನೆ ಮಾಡಲಾಗುತ್ತಿದೆ. ದೇವತೆಗಳ ವಿಗ್ರಹಗಳನ್ನು ಅಥವಾ ದೇವತೆಗಳ ಚಿತ್ರಗಳನ್ನು ಸಾರ್ವಜನಿಕವಾಗಿ ಅವಮಾನಿಸುವ ಮೂಲಕ, ಹಿಂದೂ ಧಾರ್ಮಿಕ ಭಾವನೆಗಳನ್ನು ನೋಯಿಸುವುದರ ಜೊತೆಗೆ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ