ಪ್ರಮುಖ ಸುದ್ದಿಗಳು

FACEBOOK ಹ್ಯಾಕ್, ಫ್ರೆಂಡ್ ಲಿಸ್ಟ್ ನಲ್ಲಿದ್ದವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಹ್ಯಾಕರ್ – ಎಚ್ಚರ ನಿಮಗೂ ಮೆಸೇಜ್ ಬಂದೀತು!!

ಕೆಲ ತಿಂಗಳ ಹಿಂದೆ ಪೊಲೀಸ್ ಅಧಿಕಾರಿಗಳ FACEBOOK ನಕಲಿ ಅಕೌಟ್ ಸೃಷ್ಟಿ ಆದ ವರ್ತಮಾನಗಳು ಬಂದಿದ್ದವು. ಬಳಿಕ ಬಂಟ್ವಾಳ ರಾಜಕೀಯ ಮುಖಂಡರಾದ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಯಾಗಿ ಅವರಿಗೆ ತಲೆನೋವು ತಂದಿದ್ದವು. ಇದೀಗ ಪತ್ರಕರ್ತರ ಸರದಿ. ಪತ್ರಿಕೆಯೊಂದರ ವರದಿಗಾರರೊಬ್ಬರ ಫೇಸ್ ಬುಕ್ ಅಕೌಂಟ್ ಅನ್ನೇ ಹ್ಯಾಕ್ ಮಾಡಿ, ಅವರ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ಶನಿವಾರ ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಉದಯವಾಣಿಗೆ ಪುಂಜಾಲಕಟ್ಟೆಯಿಂದ ವರದಿ ಮಾಡುವ ರತ್ನದೇವ್ ಪುಂಜಾಲಕಟ್ಟೆ ಅವರ ಫೇಸ್ ಬುಕ್ ಖಾತೆಯಿಂದ ಅದರ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ನನಗೆ ಅರ್ಜೆಂಟ್ ಆಗಿ ಹಣ ಬೇಕು, ನಾಳೆ ಮರಳಿಸುತ್ತೇನೆ, ನಿಮ್ಮಲ್ಲಿ ಗೂಗಪ್ ಪೇ ಅಥವಾ ಫೋನ್ ಪೇ ಇದ್ದರೆ ಹಣ ಕಳುಹಿಸಿ, ನನ್ನ ಸ್ನೇಹಿತನ ನಂಬರ್ ನೀಡುತ್ತೇನೆ. ಅದಕ್ಕೆ ಕಳುಹಿಸಿ, ನಾಳೆ ಮರಳಿಸುತ್ತೇನೆ ಎಂದು ಸಂದೇಶವನ್ನು ಹ್ಯಾಕರ್ ಕಳುಹಿಸುತ್ತಾರೆ. ರತ್ನದೇವ್ ಅವರು ಶನಿವಾರ ಸಂಜೆ ಜೊತೆಗೆ ಇರುವ ವೇಳೆ ಅವರ ಪತ್ರಕರ್ತ ಸ್ನೇಹಿತರಿಗೇ ಈ ರೀತಿಯ ಸಂದೇಶಗಳು ಬರತೊಡಗಿದ ಹಿನ್ನೆಲೆಯಲ್ಲಿ ಕೂಡಲೇ ಅಲರ್ಟ್ ಆದ ರತ್ನದೇವ್ ಅವರು, ಸ್ನೇಹಿತರ ಸಹಾಯದಿಂದ ಎಲ್ಲರಿಗೂ ಈ ಕುರಿತು ಜಾಗೃತಿಯ ಸಂದೇಶ ನೀಡಿದ್ದಾರೆ. ವಿಷಯವನ್ನು ಪೊಲೀಸರಿಗೂ ತಿಳಿಸಲಾಗಿದ್ದು, ಹ್ಯಾಕರ್ ನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆಗುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿವೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ