ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಗ್ರಾಪಂಗಳು ಇರುವ ಬಂಟ್ವಾಳದಲ್ಲಿ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವ 89 ಎಣಿಕಾ ಟೇಬಲ್ ಗಳಲ್ಲಿ ನಡೆಯುತ್ತಿದ್ದು, ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಎಣಿಕಾ ಕೇಂದ್ರದ ಹೊರಗೆ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ.
ಇದೇ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷಮಯ ವಾತಾವರಣವೂ ಮೂಡಿ ಬಳಿಕ ಪೊಲೀಸರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಯಿತು.
ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತ ಎಣಿಕೆಯು ಮುಗಿಯವ ಸಂದರ್ಭ ಮಧ್ಯಾಹ್ನ ಸುಡುಬಿಸಿಲೇರಿತ್ತು. ಫಲಿತಾಂಶ ಘೋಷಣಾಪತ್ರವನ್ನು ಅಭ್ಯರ್ಥಿಗಳು ಪಡೆಯುವ ಮುನ್ನವೇ ಬೆಂಬಲಿಗರು ಸಂಭ್ರಮಾಚರಣೆಗಳನ್ನು ನಡೆಸುತ್ತಿದ್ದು, ಮತ್ತೊಂದು ಸುತ್ತಿನ ಎಣಿಕೆಗೆ ಬರುವ ಅಭ್ಯರ್ಥಿಗಳು ಹೊರಗೆ ಕಾಯುತ್ತಿದ್ದರು.
ಇತ್ತೀಚಿನ ಮಾಹಿತಿ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ತಮ್ಮ ತಮ್ಮ ಬೆಂಬಲಿಗರು ವಿಜಯಿಯಾಗಿದ್ದಾರೆ ಎಂದು ಹೇಳುವ ಪಂಚಾಯಿತಿಗಳನ್ನು ಅವಲೋಕಿಸಿದಾಗ ಒಟ್ಟು 18 ಗ್ರಾಪಂಗಳಲ್ಲಿ 10 ಗ್ರಾಪಂಗಳ ವಿಜೇತರಲ್ಲಿ ಬಿಜೆಪಿ ಬೆಂಬಲಿತರು ಅಧಿಕವಿದ್ದರೆ, ಉಳಿದ 8 ಗ್ರಾಪಂಗಳಲ್ಲಿ 7 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿದ್ದಾರೆ ಸಂಗಬೆಟ್ಟು, ಪಿಲಾತಬೆಟ್ಟು, ಕಾವಳಮುಡೂರು, ಉಳಿ, ಅಮ್ಮುಂಜೆ, ,ಮೇರಮಜಲು, ರಾಯಿ, ಅನಂತಾಡಿ, ಇಡ್ಕಿದು, ವಿಟ್ಲಮುಡ್ನೂರುಗಳಲ್ಲಿ ಬಿಜೆಪಿ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದರೆ, ಮಾಣಿಲ, ಪೆರ್ನೆ, ನಾವೂರು, ಕರಿಯಂಗಳ, ಕರೋಪಾಡಿ, ಫಜೀರು, ಪೆರ್ನೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ 10, ಕಾಂಗ್ರೆಸ್ 7 ಪೆರಾಜೆ ಗ್ರಾಪಂ ಸಮಬಲದಲ್ಲಿದೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡಿವೆ. ಆದರೆ ಚುನಾವಣೆ ಪಕ್ಷ ಚಿಹ್ನೆಯಡಿ ನಡೆಯದ ಕಾರಣ ಕೇವಲ ವಿಜೇತ ಅಭ್ಯರ್ಥಿಗಳ ಘೋಷಣೆಯನ್ನಷ್ಟೇ ಮಾಡುತ್ತದೆ. ಸಂಜೆ 4 ಗಂಟೆಗೆ ಒದಗಿಸಲಾದ ಮಾಹಿತಿ ಪ್ರಕಾರ ವಿಜೇತರು ಇವರು.
ಅಮ್ಮುಂಜೆ – ಕಾರ್ತಿಕ್ ಬಲ್ಲಾಳ್, ಭಾಗೀರತಿ, ಪ್ರಮೀಳಾ, ರವೀಂದ್ರ, ರೊನಾಲ್ಡ್ ಡಿಸೋಜ, ಲೀಲಾವತಿ, ಫೌಝಿಯಾ, ಅಬ್ದುಲ್ ರಝಾಕ್, ನೆಫೀಸಾ, ಲಕ್ಷ್ಮೀ, ವಾಮನ ಆಚಾರ್ಯ, ರಾಧಾಕೃಷ್ಣ ತಂತ್ರಿ, ಲೀಲಾವತಿ
ಕರಿಯಂಗಳ – ಗೀತಾ ಎಸ್, ಲಕ್ಷ್ಮೀಶ ಶೆಟ್ಟಿ, ಕೆ.ಅಬ್ದುಲ್ ಖಾದ್ರಿ, ವೀಣಾ, ಗೀತಾ, ನಾಗವೇಣಿ, ಮಹಮ್ಮದ್ ಶಮೀಮ್, ಲೋಕೇಶ್ ಪೂಜಾರಿ, ಚಂದ್ರಾವತಿ, ರಾಧಾ, ಚಂದ್ರಹಾಸ ಪಲ್ಲಿಪ್ಪಾಡಿ, ರಾಜು ಜಿ.ಕೋಟ್ಯಾನ್
ಸಜಿಪಮುನ್ನೂರು – ಚಂದ್ರಕಲಾ, ಗಣೇಶ್, ಸಂದೀಪ್ ಕುಮಾರ್
ಮಾಣಿಲ – ಶೋಭಾ ಕೆ, ಮಾಲತಿ ಎನ್.ಕೆ, ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀಧರ ಬಾಳೆಕಲ್ಲು, ರಾಜೇಶ್ ಕುಮಾರ್ ಬಿ, ವನಿತಾ, ಗೀತಾ, ಚಂದ್ರಶೇಖರ್ ಪೂಜಾರಿ,
ಅನಂತಾಡಿ – ರಶ್ಮಿ ಎಸ್.ಎನ್, ಮಮಿತಾ ಕೆ. ಕಿದೆನಾರು, ಪುರಂದರ ಗೌಡ
ಮಾಣಿ – ಸೀತಾ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ ಕೆ, ರಮಣಿ, ಸುದೀಪ್ ಕುಮಾರ್ ಶೆಟ್ಟಿ, ಮಿತ್ರಾಕ್ಷಿ, ಕೆ.ನಾರಾಯಣ ಶೆಟ್ಟಿ, ಸುಜಾತಾ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಪಿರೇರಾ
ಗೋಳ್ತಮಜಲು – ಇಕ್ಬಾಲ್, ಮಹಮ್ಮದ್ ಮುಸ್ತಾಫ, ಪ್ರೇಮ, ಹರಿಣಾಕ್ಷಿ, ಅಭಿಷೇಕ್ ಎನ್ ನೆಟ್ಲ, ಯೂಸುಫ್ ಹೈದರ್, ಸುಮಯ್ಯಾ,
ಮೇರಮಜಲು – ಚೆನ್ನಮ್ಮ, ಅನಿಲ್ ಫೆರ್ನಾಂಡಿಸ್, ಜಯಶ್ರೀ, ಅಶೋಕ್ ಪೂಜಾರಿ, ವೃಂದಾ, ಫ್ರಾನ್ಸಿಸ್ ಮೆಂಡೋನ್ಸಾ, ಸುಗಂಧಿ, ವಿಮಲ ನಾಯ್ಕ, ಸತೀಶ್ ನಾಯ್ಕ, ಸವಿತಾ, ಹರಿಣಾಕ್ಷಿ, ಪದ್ಮನಾಭ ಶೆಟ್ಟಿ