: ಕೊಳ್ನಾಡು ಗ್ರಾಮದ ವಾರ್ಡೊಂದರಲ್ಲಿ ಚುನಾವಣೆಗೆ ಸ್ಪರ್ಧೆಗಿಳಿದಿದ್ದ ಅಭ್ಯರ್ಥಿಗಳು ಮನೆಗೆ ತೆರಳುವ ಪ್ರದೇಶದಲ್ಲಿ ತೆಂಗಿನಕಾಯಿಯೊಂದರ ಮೇಲೆ ಯಾವುದೋ ಲಿಪಿಯಲ್ಲಿ ಬರೆದದ್ದು ನಿನ್ನೆ ರಾತ್ರಿ ಕಂಡುಬಂದಿದ್ದು, ಸ್ಥಳೀಯರು ಇದೊಂದು ವಾಮಾಚಾರದ ಕೃತ್ಯವಿರಬಹುದು ಎಂದು ಶಂಕಿಸಿದ್ದಾರೆ. ಕೊಳ್ನಾಡು ಗ್ರಾಮದ ಕುಳಾಲು ಮತ್ತು ಬಂಡಮುಗೇರು ಕ್ರಾಸ್ ನಲ್ಲಿಯೂ ತೆಂಗಿನಕಾಯಿಗಳು, ಲಿಂಬೆ ಹಣ್ಣು ಇಟ್ಟದ್ದು ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಬೆಂಬಲಿಗರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ (ಮಲರಾಯಿ) ದೈವದ ಮೊರೆ ಹೋದರು.