ಬಂಟ್ವಾಳ

ಗ್ರಾಪಂ ಚುನಾವಣೆ: ನಿಧಾನಗತಿಯಲ್ಲಿ ಮತದಾನ ಆರಂಭ

ಬಂಟ್ವಾಳ: ತಾಲೂಕಿನ 57  ಗ್ರಾಪಂಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಸಾಲಿನಲ್ಲಿ ನಿಂತುಕೊಂಡು ಮಾಸ್ಕ್ ಧರಿಸಿದ ಮತದಾರರು, ಓಟು ಹಾಕಲು ಆಗಮಿಸುತ್ತಿರುವುದು ಕಂಡುಬಂತು. ಈ ಬಾರಿ ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ಮಾಡಬೇಕಿರುವ ಕಾರಣ, ಮತದಾರರು ತಾವು ಮತ ಚಲಾಯಿಸಬೇಕಾದ ಅಭ್ಯರ್ಥಿಯ ವಿವರ, ಚಿಹ್ನೆಗಳನ್ನು ಮೊದಲೇ ಮನನ ಮಾಡಿಕೊಂಡು ಮತದಾನ ಕೇಂದ್ರಕ್ಕೆ ಹೋಗಲು ಅಣಿಯಾಗುತ್ತಿದ್ದರು. ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.57 ಗ್ರಾಪಂಗಳ 822 ಸ್ಥಾನಗಳಿಗೆ ನಡೆಯಲಿದ್ದು, ಒಟ್ಟು 2,75,097 ಮಂದಿ  ಹಕ್ಕು ಚಲಾಯಿಸಲು ಅವಕಾಶವಿದೆ. ಪ್ರತಿ ಬೂತ್ ಗೆ ತಲಾ 6ರಂತೆ ಒಟ್ಟು 2376 ಮಂದಿ ತಮಗೆ ನಿಗದಿಪಡಿಸಲಾಗಿರುವ ಬೂತ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, 822 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ, 1925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿಸೂಕ್ಷ್ಮ, 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳು ತಾಲೂಕಿನಲ್ಲಿವೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ