ಪ್ರಮುಖ ಸುದ್ದಿಗಳು

ಗ್ರಾಪಂ ಚುನಾವಣೆ, ಅನುಮಾನಗಳಿದ್ದರೆ ಇಲ್ಲಿ ಓದಿರಿ..

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೊಂದಾಯಿತ ಗುತ್ತಿಗೆ ದಾರರು ಸ್ಪರ್ಧಿಸಲು ಅವಕಾಶ ನೀಡಬಹುದೇ – ಸ್ಪಷ್ಠೀಕರಣ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ ಗ್ರಾಮ ಪಂಚಾಯಿತಿ ಸದಸ್ಯನಾಗಲು ಅನರ್ಹತೆಯನ್ನು ಪರಾಂಬರಿಸಬಹುವುದು. ಗುತ್ತಿಗೆದಾರರು ತಾನು ಸ್ಪರ್ಧಿಸಿರುವ ಗ್ರಾಮ ಪಂಚಾಯಿತಿಯಲ್ಲಿ ಹೊರತುಪಡಿಸಿ ಬೇರೆ ಗ್ರಾಮ ಪಂಚಾಯಿತಿಯಲಿ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಅನರ್ಹತೆ ಅನ್ವಯವಾಗುವುದೇ ಎಂಬುದಕ್ಕೆ – ಸ್ಪಷ್ಟೀಕರಣ: ಸ್ಪರ್ಧಿಸುವವರು ಮತ್ತು ಸ್ಪರ್ಧಿಸಲು ಇಚ್ಛಿಸುವ ಗ್ರಾಮ ಪಂಚಾಯಿತಿ ಯೊಂದಿಗೆ ಚಾಲ್ತಿಯಲ್ಲಿರುವ ಯಾವುದೇ ಕರಾರು ಮಾಡಿಕೊಂಡಿದ್ದರೆ ಸದರಿ ಪ್ರಕರಣ ಅನ್ವಯವಾಗುತ್ತದೆ.
ಮಹಿಳಾ ಮೀಸಲಾತಿ ಸ್ಥಾನಕ್ಕೆ ತೃತೀಯ ಲಿಂಗಿಗಳು ಸ್ಪರ್ಧಿಸಬಹುದು-ಸ್ಪಷ್ಠೀಕರಣ: ಅಭ್ಯರ್ಥಿಯು ನಾಮಪತ್ರ ನಮೂನೆಯಲ್ಲಿ ಮಹಿಳೆ ಎಂದು ಘೋಷಿಸಿಕೊಂಡಲ್ಲಿ ಅವರನ್ನು ಮಹಿಳೆ ಎಂದು ಮಹಿಳಾ ಮೀಸಲು ಸ್ಥಾನಕ್ಕೆ ಪರಿಗಣಿಸಲಾಗುವುದು. ಮಹಿಳೆ ಎಂದು ಘೋóಷಿಸಿಕೊಳ್ಳದ್ದಿದ್ದಲ್ಲಿ ಪುರುಷ ಎಂದು ಪರಿಗಣಿಸಲಾಗುವುದು.
ಮತಪತ್ರದಲ್ಲಿ ಅಭ್ಯರ್ಥಿಯ ಹೆಸರನ್ನು ಮುದ್ರಿಸುವ ಸಂಬಂಧ ಸ್ಪಷ್ಠೀಕರಣ- ಪ್ರಪತ್ರ-10 ತಯಾರಿಸುವಾಗ ಅಭ್ಯರ್ಥಿಯ ನಾಮಪತ್ರದಲ್ಲಿ ನಮೂದಿಸಿರುವ ಹೆಸರನ್ನು ಪರಿಗಣಿಸಿ ಕನ್ನಡ ವರ್ಣಮಾಲೆಯ ಅನುಕ್ರಮದಲ್ಲಿ ತಯಾರಿಸಬೇಕು. ಅಭ್ಯರ್ಥಿಗಳು ತಮ್ಮ ಹೆಸರನ್ನು ಮತಪತ್ರದಲ್ಲಿ ಹೇಗೆ ಮುದ್ರಿಸಬೇಕು ಎಂದು ಬರಹದಲ್ಲಿ ನೀಡಿದ ಹೆಸರನ್ನು ಅವನ ಅನುಕ್ರಮ ಸಂಖ್ಯೆಯಲ್ಲಿ ನಮೂದಿಸಿ ಪ್ರಪತ್ರ-10ನ್ನು ಸಿದ್ಧಪಡಿಸಲಾಗುವುದು.
ಆಶಾ ಕಾರ್ಯಕರ್ತೆಯರುಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಬಹುವುದೇ ಎಂಬ ಪ್ರಶ್ನೆಗೆ ಷ್ಪಷ್ಠೀಕರಣ-ಕೇಂದ್ರ /ರಾಜ್ಯ ಸರಕಾರ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಿಂದ ವೇತನ, ದಿನಭತ್ಯೆ/ಸೌಲಭ್ಯಗಳನ್ನು ಪಡೆಯುತ್ತಿದ್ದಲ್ಲಿ ಹಾಗೂ ಮೇಲಿನ ಸಂಸ್ಥೆಗಳಿಂದ ಶಿಸ್ತು ಕ್ರಮಕ್ಕೆ ಒಳಪಡುವಂತಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 12 (ಜಿ) ರಂತೆ ಲಾಭದಾಯಕ ಹುದ್ದೆಯಾಗಿರುತ್ತದೆ. ಲಾಭಾದಾಯಕ ಹುದ್ದೆಯನ್ನು ಹೊಂದಿರುವವರು ಅನರ್ಹತೆಗೆ ಒಳಪಡುತ್ತಾರೆ.
   ಪ್ರಸಕ್ತ ಸಾಲಿನ ಡಿಸೆಂಬರ್ 12 ರಂದುಚುನಾವಣಾ ಅಧಿಕಾರಿಗಳು ಚುನಾವಣಾಕರ್ತವ್ಯ ನಿರ್ವಹಿಸುವ ಬಗ್ಗೆ ಸ್ಪಷ್ಠೀಕರಣ ಡಿಸೆಂಬರ್ 12 ಎರಡನೇ ಶನಿವಾರವೂ ನೆಗೋಷೆಬಲ್ ಇನ್‍ಸ್ಟ್ರೊಮೆಂಟ್ ಆ್ಯಕ್ಟ್‍ನಂತೆ ರಜೆ ಘೋಷಿಲಾಗಿರುವುದಿಲ್ಲ ಆದ್ದರಿಂದ ಚುನಾವಣಾ ವೇಳಾಪಟ್ಟಿಯಂತೆ, ಮೊದಲನೇ ಹಂತದಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ನಡೆಸಬೇಕು. ಎರಡನೇ ಹಂತದಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ನಾಮಪತ್ರವನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ