ಸಾಂದರ್ಭಿಕ ಚಿತ್ರ
ಬಂಟ್ವಾಳ : ಕರಾವಳಿಹಾಗೂ ದಕ್ಷಿಣ ಒಳನಾಡಿನ ಭಾಗ, ಬೆಂಗಳೂರು, ಮಂಗಳೂರಿನಲ್ಲಿಮಂಗಳವಾರ ಸಂಜೆ ವೇಳೆ ಭಾರಿ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಮಂಗಳವಾರ ಸಂಜೆ ಸುಮಾರು 6ರ ಬಳಿಕ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ. ಭಾರಿ ಸೆಖೆ ಇದ್ದ ಪ್ರದೇಶಗಳಲ್ಲೀಗ ತಂಪಾದ ವಾತಾವರಣ ಮೂಡಿದ್ದರೆ, ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು ಬಸ್ ನಿಲ್ದಾಣಗಳಲ್ಲಿ ಕಾಯುವವರು ಸಮಸ್ಯೆ ಅನುಭವಿಸಬೇಕಾಯಿತು. ಮಳೆಯಿಂದಾಗಿ ಕೆಲವೆಡೆ ರಸ್ತೆ ಬದಿ ಹಾಕಿದ ಮಣ್ಣು ರಸ್ತೆಗೆ ಬಂದಿದ್ದು, ವಾಹನ ಸವಾರರೂ ರಾತ್ರಿ ವೇಳೆ ಜಾಗ್ರತೆಯಿಂದ ತೆರಳದೇ ಇದ್ದರೆ ಅಪಘಾತ ಭೀತಿ ಎದುರಿಸಬೇಕಾಗಬಹುದು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)