ಕವರ್ ಸ್ಟೋರಿ

ಸಜೀಪಮುನ್ನೂರು ಆರೋಗ್ಯ ಉಪಕೇಂದ್ರ ಕಂಪೌಂಡ್ ನಲ್ಲಿ ವರ್ಲಿ ಚಿತ್ರರಚನೆ

Harish Mambady, www.bantwalnews.com

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಆರೋಗ್ಯ ಉಪಕೇಂದ್ರದಲ್ಲಿ ಮಂಚಿ ಕೊಳ್ನಾಡು ಹೈಸ್ಕೂಲಿನ ಸುಮಾರು 25ರಷ್ಟು ವಿದ್ಯಾರ್ಥಿಗಳು ನಂದಾವರ ಹೈಸ್ಕೂಲಿನ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್ ಸಲಹೆಯಂತೆ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ನೇತೃತ್ವದಲ್ಲಿ ಬುಧವಾರ ವರ್ಲಿ ಚಿತ್ರ ರಚಿಸುವ ಮೂಲಕ ಗಮನ ಸೆಳೆದರು.

ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟ ಚಿತ್ರಗಳನ್ನು ಆರೋಗ್ಯ ಕೇಂದ್ರದ ಆವರಣ ಗೋಡೆಯಲ್ಲಿ ರಚಿಸಿದ ಮಕ್ಕಳು ರಸ್ತೆ ಬದಿಯೇ ಇರುವ ಆರೋಗ್ಯ ಉಪಕೇಂದ್ರಕ್ಕೆ ಹೊಸರೂಪವನ್ನು ನೀಡಿದ್ದಾರೆ.

ದಿನವಿಡೀ ನಡೆದ ಕಾರ್ಯಾಗಾರಕ್ಕೆ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಆರೋಗ್ಯ ಕೇಂದ್ರದ ಸುಮನಾ ಕ್ರಾಸ್ತಾ, ಪ್ರಮುಖರಾದ ಜಯಶಂಕರ್ ಕಾನ್ಸಲೆ. ಮಂಚಿ ಕೊಳ್ನಾಡು ಹೈಸ್ಕೂಲಿನ ಸಹಶಿಕ್ಷಕರಾದ ಶ್ರೀರಾಮಮೂರ್ತಿ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ,  ನಂದಾವರ ಹೈಸ್ಕೂಲಿನ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ್, ಗಿರೀಶ್ ಪೆರ್ವ, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts