ಬಂಟ್ವಾಳ: ಕಡೇಶಿವಾಲಯ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಟೊದಲ್ಲಿ ತೆರಳುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸುದ್ದಿಯಾಗಿದ್ದಾರೆ.
ಭಾನುವಾರ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕರು ತೆರುಳುವ ಸಂದರ್ಭ ಶಾಸಕರ ಶಿಫಾರಸು ಮೇರೆಗೆ ಸ್ವಯಂ ಉದ್ಯೋಗದ ಯೋಜನೆಯಡಿಯಲ್ಲಿ ಅಟೋರಿಕ್ಷಾ ಸೌಲಭ್ಯ ಪಡೆದ ಮೋಹನ್ ನಾಯ್ಕ್ ಅವರು ಶಾಸಕರಿಗೆ ತನ್ನ ಅಟೋರಿಕ್ಷಾ ವನ್ನು ತೋರಿಸಿದರು.ಇದನ್ನು ನೋಡಿದ ಬಳಿಕ ಶಾಸಕರು ರಿಕ್ಷಾದಲ್ಲಿ ಕುಳಿತು ಮುಂದಿನ ಶಿಲಾನ್ಯಾಸ ಕಾಮಗಾರಿಗಳಿಗೆ ತೆರಳಿದ್ದು ಜನರ ಗಮನಸೆಳೆಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…