ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ನವದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಬಳಿಯ ಓವರ್ ಬ್ರಿಡ್ಜ್ನಲ್ಲಿ ನಡೆದಿದೆ. ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್ ಮೃತಪಟ್ಟವರು. ಮಂಗಳೂರಿನ ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರಲೇನ್ ನಲ್ಲಿರುವ ಮನೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ. ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಪ್ರಿಯಾ ಕೊನೆಯುಸಿರೆಳೆದಿದ್ದು, ರಯಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…