ಕಲ್ಲಡ್ಕ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಯಿತು.
ಜಿಪಂ ಸದಸ್ಯೆ ಕೆ.ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವಾ, ಗ್ರಾಪಂನ ನಿಕಟಪೂರ್ವ ಸದಸ್ಯರಾದ ಗೋಪಾಲ ಪೂಜಾರಿ, ಗೋಪಾಲಕೃಷ್ಣ ಪೂವಳ. ಮಹಮ್ಮದ್ ಮುಸ್ತಫಾ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, 181, 182 ಬೂತ್ ಸಮಿತಿಯ ವತಿಯಿಂದ ಕಾರ್ಯಕ್ರಮ ನಡೆದವು.
181 ಬೂತ್ ಸಮಿತಿಯ ರಾಯಪ್ಪ ಕೋಡಿ ಕೋಟ್ರಸ್ ರಸ್ತೆ, ರಾಯಪ್ಪ ಕೋಡಿ ರಮೇಶ್ ಶೆಟ್ಟಿಗಾರ್ ಅವರ ಅಂಗಡಿ ಬಳಿಯಿಂದ ನಾರಾಯಣರವರ ಮನೆಯವರೆಗಿನ ರಸ್ತೆಗೆ ಇಂಟರ್ಲಾಕ್ ಅಳವಡಿಕೆ, ರಾಯಪ್ಪ ಕೊಡಿ ಕೃಷ್ಣನಾಯ್ಕ ಮನೆ ಬಳಿ ಕಾಂಕ್ರೀಟ್ ಚರಂಡಿ ರಚನೆ, ಅಮ್ಟೂರು ಗ್ರಾಮದ ತಾರಾ ಬರಿ ಎಂಬಲ್ಲಿ ಹಿಂದೂ ರುದ್ರಭೂಮಿಗೆ ನೀರಿನ ಟ್ಯಾಂಕ್ ಹಾಗೂ ವಿದ್ಯುತ್ ದೀಪ ಅಳವಡಿಕೆ, ಅಮ್ಟೂರು ಗ್ರಾಮದ ಹೋಯಿಗೆ ಗದ್ದೆ ಜಗದೀಶ್ ಶೆಟ್ಟಿಗಾರ್ ಅವರ ಮನೆಯಿಂದ ಚಾಮುಂಡಿ ಕಟ್ಟೆಯವರೇಗೆ ರಸ್ತೆಯ ಕಾಂಕ್ರೀಟಿಕರಣ, ಅಮ್ಟೂರು ಗ್ರಾಮದ ಹೊಯಿಗೆ ಗದ್ದೆ ಕೃಷ್ಣಪ್ಪ ಪೂಜಾರಿಯವರ ಮನೆಯಿಂದ ದಿವಂಗತ ಬಾಬು ಪೂಜಾರಿಯವರ ಮನೆತನಕ ರಸ್ತೆ ಕಾಂಕ್ರೀಟಿಕರಣ, ದಿವಂಗತ ಕಾಂತು ನಲಿಕೆ ಮನೆ ಬಳಿ ತಡೆಗೋಡೆ ರಚನೆ, ಹೋಯಿಗೆ ಗದ್ದೆ ಎಂಬಲ್ಲಿ ಮನೆಗಳ ಮೇಲೆ ಹಾದು ಹೋಗಿರುವ ಎಚ್ ಟಿ ಮತ್ತು ಎಲ್.ಟಿ. ವಿದ್ಯುತ್ತು ಲೈನ್ ಗಳ ಸ್ಥಳಾಂತರ, ರಘುನಾಥ ಅವರ ಮನೆ ಬಳಿಯಿಂದ ಕೂಸಪ್ಪ ನವರ ಮನೆಯಾ ಹಿಂದೆ ಕಾಂಕ್ರೀಟ್ ತಡೆಗೋಡೆ ರಚನೆ, ಅಮ್ಟೂರ್ ಮುಖ್ಯ ರಸ್ತೆಯಿಂದ ತಾರನಾಥ ಪೂಜಾರಿ ಮನೆಯವರೆಗೆ ರಸ್ತೆ ಕಾಂಕ್ರೀಟಿಕರಣ, ಅಮ್ಟೂರು ಗ್ರಾಮದ ನೆಲ್ಲಿಗುಡ್ಡೆ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗಳನ್ನು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ ಉದ್ಘಾಟಿಸಿ ಶುಭ ಕೋರಿದರು
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬಿಜೆಪಿ ಪ್ರಮುಖರೂ ಆಗಿರುವ ದಿನೇಶ್ ಅಮ್ಟೂರು, ಬೂತ್ ಸಮಿತಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಾಡ್ಕ, ಶ್ರೀಧರ ಸುವರ್ಣ, ನಿಕಟಪೂರ್ವ ಪಂಚಾಯತ್ ಸದಸ್ಯರಾದ ಮಾಜಿ ಉಪಾಧ್ಯಕ್ಷರಾದ ಗೋಪಾಲ ಪೂಜಾರಿ ಹಾಗೂ ಸದಸ್ಯರಾದ ಗೋಪಾಲಕೃಷ್ಣ ಪೂವಳ, ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಹಾಬಲ ಸಾಲ್ಯಾನ್, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿಗಾರ್, ಮಹಾಬಲ ಕುಲಾಲ್, ಜಗದೀಶ ಬಜಾರ್, ಮನೋಜ್ ಕಟ್ಟೆಮಾರ್, ಕೌಶಲ್ ಶೆಟ್ಟಿ, ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪಕ್ಷದ ಕಾರ್ಯಕರ್ತರು ಊರಿನ ಪ್ರಮುಖರು ಭಾಗವಹಿಸಿದ್ದರು. ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿದರು ಗೋಪಾಲ ಪೂಜಾರಿ ವಂದಿಸಿದರು.