ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ ಕರ್ಣಾಟಕ ಬ್ಯಾಂಕ್ ಲಿ.ನ ಮಾಜಿ ಅಧ್ಯಕ್ಷರಾದ ಸಜೀಪ ತಲೆಮೊಗರು ಅನಂತಕೃಷ್ಣರು ಇತ್ತೀಚೆಗೆ ನಿಧನರಾದ ಬಗ್ಗೆ ಕಳೆದ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಲಯನ್ಸ್ ನಿರ್ಮಲ ಹೃದಯ ವಿಶೇಷ ಶಾಲೆಯ ಸಂಚಾಲಕ ದಾಮೋದರ ಬಿ.ಎಂ. ಅನಂತಕೃಷ್ಣರು ಬ್ಯಾಂಕಿನ ಉನ್ನತಿಗೆ ಸಮರ್ಪಿಸಿದ ಸೇವೆಯನ್ನು ತಿಳಿಸುತ್ತಾ, ಅದರೊಂದಿಗೆ ಲಯನ್ಸ್ ಕ್ಲಬ್ ನಡೆಸಿದ ಶಾಶ್ವತ ಯೋಜನೆಗಳಿಗೆ ಮಾಡಿದ ಮಾರ್ಗದರ್ಶನ ಮತ್ತು ಸಹಕಾರಗಳನ್ನು ಸ್ಮರಿಸಿದರು. ಪ್ರಥಮ ಉಪ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ, ಕ್ಲಬ್ ಅಧ್ಯಕ್ಷರಾದ ಎಂ. ಕೃಷ್ಣಶ್ಯಾಮ್ ನುಡಿನಮನ ಸಲ್ಲಿಸಿದರು. ಸ್ಥಾಪಕ ಸದಸ್ಯರಾದ ಎಂ. ಶ್ಯಾಮ್ ಭಟ್, ಎನ್. ಸತೀಶ್ ಕುಡ್ವ, ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ, ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ವೈಕುಂಠ ಕುಡ್ವ, ಖಜಾಂಚಿ ದಿಶಾ ಆಶೀರ್ವಾದ್, ಮಧ್ವರಾಜ್ ಕಲ್ಮಾಡಿ, ರೋಹಿತಾಶ್ವ ಎಂ., ರಾಧಾಕೃಷ್ಣ ಬಂಟ್ವಾಳ ಮತ್ತಿತರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)