ವಿಟ್ಲ

ಹಿರಿಯ ರಂಗಕರ್ಮಿ ಮೋಹನ ಸೋನಾ ಅವರಿಗೆ ವಿಟ್ಲದಲ್ಲಿ ನುಡಿನಮನ

ಜಾಹೀರಾತು

ವಿಟ್ಲ: ಹಿರಿಯ ಕಲಾವಿದ ರಂಗಕರ್ಮಿ ಮೋಹನ ಸೋನಾ ಅವರಿಗೆ ನುಡಿನಮನ ಕಾರ್ಯಕ್ರಮ ಕನ್ನಡ ಸಂಘ ವಿಟ್ಲ  ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭ ಕನ್ನಡ ಸಂಘ ವಿಟ್ಲ ಗೌರವಾಧ್ಯಕ್ಷ  ಅನಂತ ಕೃಷ್ಣ ಹೆಬ್ಬಾರ್ ಮಾತನಾಡಿ ಮೋಹನ ಸೋನಾ ಅವರು ಮುಗ್ಧ ಮನಸ್ಸಿನ, ಒಬ್ಬ ಕಲಾಕಾರ ಹಾಗೂ ರಂಗಕರ್ಮಿ ಯಾಗಿದ್ದರು. ಪ್ರಕೃತಿಯನ್ನೇ ರಂಗಭೂಮಿ ಮಾಡಿಕೊಂಡ ಒಬ್ಬ ಅದ್ಭುತ ನಾಟಕಕಾರ ಎಂದು ಕಂಬನಿ ಮಿಡಿದರು. ಕನ್ನಡ ಸಂಘ ವಿಟ್ಲ ಅಧ್ಯಕ್ಷರಾದ ಶಂಕರನಾರಾಯಣ ಪ್ರಸಾದ್ ಮಾತನಾಡಿ ಸರಕಾರದ ಸಾಮಾಜಿಕ  ಕಾರ್ಯಕ್ರಮವಾದ ಸಾಕ್ಷರತಾ ಆಂದೋಲನ  ಜನಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆ ಕಾಲಕ್ಕೆ ಆ ಕಾರ್ಯಕ್ರಮವನ್ನು ಸಮಾಜದ ಎಲ್ಲಾ ಜನರಿಗೆ ತಲುಪುವಂತೆ ಬೀದಿ ನಾಟಕ,ಹಾಡು ಇತ್ಯಾದಿ ಇತ್ಯಾದಿ ಗಳ ಮೂಲಕ ನಿರ್ವಹಿಸಿರುವ ಅವರ ಜಾಣ್ಮೆ ಅವಸ್ಮರಣೀಯ ಎಂದು ಹೇಳಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದರು.

ಕಾರ್ಯಕ್ರಮದಲ್ಲಿ  ಅವರ ಒಡನಾಡಿ  ವಿಶ್ವನಾಥ ಗೌಡ, ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ, ಸೀತಾ ಲಕ್ಷ್ಮೀ ವರ್ಮಾ ಮತ್ತು ರಾಜಶೇಖರ್ ವಿಟ್ಲ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts