ಬಂಟ್ವಾಳ: ಪರಮ ಪ್ರಸಾದ ಎನ್ನುವುದು ಕ್ರೈಸ್ತರ ಬದುಕಿನ ಅತಿ ಮುಖ್ಯ ಸಂಸ್ಕಾರಗಳಲ್ಲಿ ಒಂದಾಗಿದ್ದು, ಇದು ಜೀವನದ ಉತ್ಸಾಹ ಹೆಚ್ಚಿಸಲಿ ಎಂದು ಪಕ್ಷಿಕೆರೆ ಧರ್ಮ ಕೇಂದ್ರದ ಗುರುಗಳಾದ ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ ಹೇಳಿದರು.
ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಗುರುವಾರ ನಡೆದ ಪರಮ ಪ್ರಸಾದದ ಕಾರ್ಯಕ್ರಮ ದಲ್ಲಿ ಅಶೀರ್ವಚನ ನೀಡಿ, ಮಕ್ಕಳಿಗೂ ಹಾಗೂ ಮಕ್ಕಳ ಹೆತ್ತವರಿಗೂ ಶುಭ ಹಾರೈಸಿದರು.
ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು.
ಮಕ್ಕಳಾದ ಅಶ್ಮಿತಾ ಸುವಾರಿಸ್, ಕ್ಲೆನೆತ್ ಸಿಕ್ವೇರಾ, ರೀಷಲ್ ಡೇಸಾ ಹಾಗೂ ರಿಶೋನ್ ಮಾರ್ಟಿಸ್ ರವರಿಗೆ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ರವರು ಪರಮ ಪ್ರಸಾದವನ್ನು ನೀಡಿದರು.
ಕೋವಿಡ್ 19 ರ ಹಿನ್ನೆಲೆಯಲ್ಲಿ ಅತ್ಯಂತ ಸರಳ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯಿತು. ಒಂದು ಮಗುವಿನ ಇಪ್ಪತ್ತೈದು ಜನರಿಗೆ ಮಾತ್ರ ಪೂಜೆಯಲ್ಲಿ ಭಾಗವಹಿಸಲು
ಅವಕಾಶವನ್ನು ನೀಡಲಾಗಿತ್ತು. ಚರ್ಚ್ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಮತ್ತು ಸಿಸ್ಟರ್ ಲೊವಿಟ ಉಪಸ್ಥಿತರಿದ್ದರು.