ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ಸೆಕ್ಟರ್ ಅಧ್ಯಕ್ಷರಾದ ಝುಬೈರ್ ಸಂಪಿಲ ಅಧ್ಯಕ್ಷತೆಯಲ್ಲಿ ದಅವಾ ಕಾನ್ಫರೆನ್ಸ್ ಸುನ್ನೀ ಮಹಲ್ ಕೈಯ್ಯೂರು, ಮಂಚಿಯಲ್ಲಿ ನಡೆಯಿತು.
ಎಸ್.ಎಸ್.ಎಫ್. ದ.ಕ ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮೀ ದುಆಃ ನಡೆಸಿ. ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಳ್ಳಾಲ ತರಗತಿಯನ್ನು ಮಂಡಿಸಿದರು.
ಲಾಕ್ ಡೌನ್ ಸಮಯದಲ್ಲಿ ಸೆಕ್ಟರ್ ಮಟ್ಟದಲ್ಲಿ ಹಮ್ಮಿಕೊಂಡಂತಹ ಆನ್ಲೈನ್ ತರ್ತೀಲ್ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ಮಟ್ಟದ ಆನ್ ಲೈನ್ ಮ್ಯಾಗಝೀನ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಮಂಚಿ ಸೆಕ್ಟರ್ ಪ್ರತಿಭೆ ಅಹ್ಮದ್ ಫಸೀಹ್ ಮಂಚಿಯವರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಅದೇ ರೀತಿ ಸೆಕ್ಟರ್ ದಅವಾ ವಿಂಗ್ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು. ಮುಖ್ಯ ಅತಿಥಿಗಳಾಗಿ ಶೈಖುನಾ ಎಣ್ಮೂರು ಉಸ್ತಾದ್, ಕರೀಂ ಕದ್ಕಾರ್, ಅಸ್ಲಂ ಸಂಪಿಲ, ಹಂಝ ಮಂಚಿ, ರಫೀಕ್ ಝುಹ್ರಿ ಮಂಚಿ, ಇಬ್ರಾಹಿಂ ಸುರಿಬೈಲು ಹಾಗೂ ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)