ಬಂಟ್ವಾಳ

ಬ್ರಾಹ್ಮಣ ಪುರೋಹಿತ, ಅರ್ಚಕರ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ, ಚಿಂತನ-ಮಂಥನ

www.bantwalnews.com ನೀಡುವ ಮತ್ತಷ್ಟು ಸುದ್ದಿಗಳನ್ನು ನಿರಂತರ ಪಡೆಯಲು ಈ ವಾಟ್ಸಾಪ್ ಗುಂಪನ್ನು ಸೇರಬಹುದು.

https://chat.whatsapp.com/K7IFcPCl7vR0dzpr8EOgYD

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕರ ಪರಿಷತ್ ( ರಿ.) ಬಂಟ್ವಾಳ, ಮಂಗಳೂರು, ಬೆಳ್ತಂಗಡಿ, ಪುತ್ತೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಚಿಂತನ ಮಂಥನ  ಬಂಟ್ವಾಳ ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ  ನಡೆಯಿತು.

ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ  ನಿರ್ದೇಶಕರು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಜೇಶ್ ನಡ್ವಂತ್ತಿಲ್ಲಾಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಇನ್ನೊರ್ವ ನಿರ್ದೇಶಕರು, ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ  ಹಿರಿಯ ಉಪಾಧ್ಯಕ್ಷರಾದ ಡಾ ವೇ.ಮೂ ಬಿ.ಎಸ್ .ರಾಘವೇಂದ್ರ ಭಟ್  ಪರಿಷತ್ತಿನ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಪದಾಧಿಕಾರಿಗಳಾದ ವೇ.ಮೂ. ಕೃಷ್ಣ ಉಪಾಧ್ಯಾಯ, ವೇ.ಮೂ. ಹರಿ ಉಪಾಧ್ಯಾಯ, ರಾಘವೇಂದ್ರ ಹೊಳ್ಳ, ಶಿಬರೂರು ಅನಂತಪದ್ಮನಾಭ ಆಚಾರ್ಯ, ಧಾರ್ಮಿಕ ಪರಿಷತ್ ಸದಸ್ಯರಾದ  ಕಶೆಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ  ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ವಿವಿಧ ಪ್ರಮುಖರಾದಪೊಳಲಿ ಗಿರಿಪ್ರಕಾಶ್ ತಂತ್ರಿ, ಡಾ.ಸತ್ಯಕೃಷ್ಣ ಭಟ್, ಶಂಕರನಾರಾಯಣ ಶರ್ಮಾ, ಪ್ರಶಾಂತ್ ಗೋರೆ, ಸುಬ್ರಹ್ಮಣ್ಯ ಭಟ್,  ಶಿವರಾಮ ಮಯ್ಯ, ಈಶ್ವರ ಭಟ್, ಶ್ರೀನಿಧಿ ಮುಚ್ಚಿನ್ನಾಯ, ಪೈಕ ವೆಂಕಟ್ರಮಣ ಭಟ್, ರಾಜಗೋಪಾಲ ಆಚಾರ್ಯ, ಸುದರ್ಶನ ಬಲ್ಲಾಳ್, ರಾಘವೇಂದ್ರ ರಾವ್, ಬಾಲಕೃಷ್ಣ ಕಾರಂತ, ಕೆ ವಾಸುದೇವ ಭಟ್ ಮೊದಲಾದವರು ಇದ್ದರು.

ಈ ಸಂದರ್ಭದಲ್ಲಿ ಮೀಸಲಾತಿ, ಜಾತಿ ಪ್ರಮಾಣ ಪತ್ರ, ಸಂಘಟನೆ, ಸರಕಾರದ ಅನುದಾನ ಸದ್ಬಳಕೆ ಮೊದಲಾದ ವಿಷಯಗಳ ಕುರಿತು ಚಿಂತನ ಮಂಥನ, ವಿವಿಧ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ