ಉದ್ಯೋಗ ನೈಪುಣ್ಯ ತರಬೇತಿಯ ಮೂರನೇ ಹಂತದ ಸಮಾರೋಪ ಕಲ್ಲಡ್ಕದಲ್ಲಿ ನಡೆಯಿತು. ಆರೆಸ್ಸೆಡಸ್ ನ ದಕ್ಷಿಣ ಪ್ರಾಂತ ಸಹಸಂಘಚಾಲಕ ಡಾ. ವಾಮನ ಶೆಣೈ ಮಾತನಾಡಿ, ಸ್ವದೇಶಿ ಸ್ವಾವಲಂಬನೆ ಸ್ವಸಾಮರ್ಥ್ಯದಿಂದ ಆತ್ಮ ನಿರ್ಭರ ಭಾರತ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದರು.
ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ.ಕಮಲಾ ಪ್ರಭಾಕರ್ ಭಟ್, ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ಹಾಗೂ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್ ಆರ್, ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ಪುತ್ತೂರು ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೊಂಕೋಡಿ ಮಾರ್ಗದರ್ಶನ ನೀಡಿದರು.
ಗ್ರಾಮ ವಿಕಾಸದ ಮಂಗಳೂರು ವಿಭಾಗ ಸಂಯೋಜಕರಾದ ಪ್ರವೀಣ್ ಸರಳಾಯ ಸ್ವಾಗತಿಸಿ. ಸುಜಿತ್ ಕಲ್ಲಡ್ಕ ವಂದನಾರ್ಪಣೆಗೈದರು. ನಂತರ ಅತಿಥಿಗಳಿಂದ ಶಿಬಿರಾರ್ಥಿಗಳಿಗೆಲ್ಲರಿಗೂ ತರಬೇತಿಯ ಪ್ರಮಾಣ ಪತ್ರ ನೀಡುವುದರೊಂದಿಗೆ ಸಮೂಹ ಭಾವಚಿತ್ರಗನ್ನು ತೆಗೆಯಲಾಯಿತು. ಶಿಭಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿ ಕೊಂಡರು. ಮೈತ್ರೇಯಿ ಗುರುಕುಲದ ಶ್ರೀಲಕ್ಷ್ಮಿ ವೈಯಕ್ತಿಕ ಗೀತೆಯೊಂದನ್ನು ಹಾಡಿದರು. ರಂಜನ್ ಆಶಯ ಗೀತೆ, ಹಾಡಿದರು.