ಕಾಲ ಬೆರಳಲ್ಲೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದ ಕಂಚಿಗಾರಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ ಕೌಶಿಕ್ ಅವರನ್ನು ರೋಟರಿ ಟೌನ್ ವತಿಯಿಂದ ಅವರ ಮನೆಗೆ ತೆರಳಿ ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಧನಸಹಾಯವನ್ನೂ ಈ ವೇಳೆ ನೀಡಲಾಯಿತು. ಈ ವೇಳೆ ನಿಯೋಜಿತ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ಕೌಶಿಕ್ ನನ್ನು ಅಭಿನಂದಿಸಿದರು. ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ ಮುಂದಿನ ದಿನಗಳಲ್ಲಿಯೂ ಕೌಶಿಕ್ ಶಿಕ್ಷಣಕ್ಕೆ ಕ್ಲಬ್ಬಿನ ವತಿಯಿಂದ ನೆರವನ್ನು ನೀಡುವುದಾಗಿ ಪ್ರಕಟಿಸಿದರು. ಈ ವೇಳೆ ರೋಟರಿ ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ, ಮಾತೃಕ್ಲಬ್ಬಿನ ಅಧ್ಯಕ್ಷ ನಾರಾಯಣ ಹೆಗ್ಡೆ, ಸುಜಾತಾ ಪಿ. ರೈ,ಜ್ಯೋತಿಂದ್ರ ಶೆಟ್ಟಿ, ಸೇಸಪ್ಪ ಮೂಲ್ಯ, ಚಿತ್ತರಂಜನ್ ಶೆಟ್ಟಿ, ಮೊಹಮ್ಮದ್ ಹನೀಫ್, ಕೇಶವ ನಾಯ್ಕ್, ಮಚೇಂದ್ರ ಸಾಲಿಯಾನ್, ಆಶಾಮಣಿ ರೈ, ಗಾಯತ್ರಿ ಲೋಕೇಶ್, ಸುಂದರ್ ಬಂಗೇರ, ಸುಂದರ್ ರೈ, ಸತೀಶ್, ದಯಾನಂದ ಶೆಟ್ಟಿ, ಆಲ್ಬರ್ಟ್ ಮೆನೆಜಸ್, ಸುಧೀರ್, ಸುರೇಶ ಸಾಲಿಯಾನ್, ನಾಗೇಶ್, ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ಟೌನ್ ಕಾರ್ಯದರ್ಶಿ ಕಿಶೋರ್ ವಂದಿಸಿದರು.