ವೇಗವಾಗಿ ರಾಂಗ್ ಸೈಡ್ ನಲ್ಲಿ ಚಲಿಸಿ ಅಪಘಾತಗಳು ಸಂಭವಿಸುವುದು ಚಾಲಕನ ಅಜಾಗರೂಕತೆಯಿಂದ ಸಂಭವಿಸುತ್ತದೆ. ಆದರೆ ವಾಹನ ಚಾಲಕ/ಸವಾರನ ಅರಿವಿಗೇ ಬಾರದಂತೆ ಅಪಘಾತಗಳು ಸಂಭವಿಸುತ್ತದೆಯಲ್ಲಾ ಅದಕ್ಕೆಲ್ಲಾ ಕಾರಣ ಕಿಲ್ಲರ್ ಹೊಂಡಗಳು.
ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳುವವರು, ಜಾಲಿ ರೈಡ್ ಮಾಡುವವರು ಕಡಿಮೆಯಾಗಿದ್ದರು. ಇದೀಗ ಕೊರೊನಾ ಕಡಿಮೆಯಾಗದೇ ಇದ್ದರೂ (ಹೆಚ್ಚಾಗುತ್ತಿದೆ) ಯಾವುದಾದರೂ ಒಂದು ನೆಪವೊಡ್ಡಿ ತಿರುಗಾಟ ಮಾಡುವವರು ಪ್ರತ್ಯಕ್ಷರಾಗುತ್ತಿದ್ದಾರೆ. ಮೂರು ಮಂದಿ ಒಂದೇ ಬೈಕ್ ನಲ್ಲಿ ಸವಾರಿ ಮಾಡುವವರು ಕಂಡುಬರುತ್ತಿದ್ದಾರೆ. ವೇಗವಾಗಿ ಹೋಗಿ ಬಿದ್ದು, ಯಾವುದಾದರೂ ವಾಹನಕ್ಕೆ ಡಿಕ್ಕಿಯಾದರೆ ಆ ಇನ್ನೊಂದು ವಾಹನದವರನ್ನು ತರಾಟೆಗೆ ತೆಗೆದುಕೊಳ್ಳುವುದೂ ಉಂಟು. ಆದರೆ ಈ ಅಪಘಾತಗಳು ಹಾಗಲ್ಲ. ಸರಿಯಾಗಿ ಚಲಾಯಿಸಿಕೊಂಡು ಹೋದರೂ ವಾಹನಗಳ ಮೇಲೆಯೇ ಮರಗಳು ಎರಗಿದರೆ ಏನು ಮಾಡುವುದು, ಎದುರು ಧುತ್ತನೆ ಹೊಂಡ ಕಂಡರೆ ಸ್ಟ್ಯಿಯರಿಂಗ್ ನಿಯಂತ್ರಣ ತಪ್ಪದೇ ಇರುತ್ತದೆಯೇ?
ಮಂಗಳವಾರ ಬಂಟ್ವಾಳ ತಾಲೂಕಿನ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ (ಬೆಂಗಳೂರಿಗೆ ಹೋಗುವ)ಯಲ್ಲಿ ಇಂಥ ಎರಡು ಅಪಘಾತಗಳು ಸಂಭವಿಸಿದವು. ಒಂದು ಸೂರಿಕುಮೇರು ಬಳಿ ದಾಸಕೋಡಿಯಲ್ಲಿ ಕಾರಿನ ಮೇಲೆ ಮರ ಬಿದ್ದರೆ, ಇನ್ನೊಂದು ಬೋಳಂಗಡಿಯಲ್ಲಿ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿತ್ತು.
ಮರದ ತುಂಡುಗಳನ್ನು ಹೇರಿಕೊಂಡು ಬಿಸಿರೋಡು ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ಮೆಲ್ಕಾರ್ ಸಮೀಪದ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿ ರಸ್ತೆಗೆ ಬಿತ್ತು. ಮರದ ಲಾರಿ ಬೀಳುವ ಸ್ಥಿತಿ ಯಲ್ಲಿ ವಾಲಿ ನಿಂತಿರುವ ವೇಳೆಯೇ ಇದನ್ನು ಪಕ್ಕಕ್ಕೆ ಸರಿಸಲು ಕ್ರೇನ್ ಸ್ಥಳಕ್ಕೆ ತರಿಸಲಾಗಿತ್ತಾದರೂ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಅಡ್ಡಲಾಗಿ ಮತ್ತೆ ಬಿತ್ತು. ಇದರಿಂದಾಗಿ ವಾಹನದಟ್ಟಣೆ ಉಂಟಾಯಿತು. ಸೋಶಿಯಲ್ ಮೀಡಿಯಾಗಳಲ್ಲಿ ಮೇಲ್ಕಾರ್ ನಲ್ಲಿ ಟ್ರಾಫಿಕ್ ಜಾಮ್ ಎಂಬ ಮೆಸೇಜುಗಳು ಹರಿದಾಡಿದವು. ಕೆಲವರು ವಿಡಿಯೋ ಮಾಡಿ ಹರಿಯಬಿಟ್ಟರು. ಇದೇ ಹೊತ್ತಿನಲ್ಲಿ ಮೇಲ್ಕಾರ್ ನ ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಆಗ ಧೋ ಎಂದು ಮಳೆ ಸುರಿಯುತ್ತಿತ್ತು.