ಬಂಟ್ವಾಳ: ಬಂಟ್ವಾಳ ಶಾಸಕರ 14 ಲಕ್ಷ ರೂ ಅನುದಾನದಲ್ಲಿ ಪಿಲಿಮೊಗರು ಗ್ರಾಮದ ಬಿಲ್ಲಾಡಿ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೂತನ ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ, ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ವಿಜಯ ರೈ, ಮೋಹನ್‌ದಾಸ್ ಗಟ್ಟಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರ್, ಜಯರಾಮ ಶೆಟ್ಟಿ ಕಾಪು, ವಿನೋದ್ ಪೂಜಾರಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…