ಕಲ್ಲಡ್ಕ

ಪಿಯುಸಿಯಲ್ಲಿ ಸಾಧನೆ: ಸೂರಿಕುಮೇರು ಚರ್ಚ್ ನಿಂದ ಅಭಿನಂದನೆ

ಜಾಹೀರಾತು

ಕಠಿಣ ಪರಿಶ್ರಮವೇ ಸಾಧನೆಗೆ ಪ್ರೇರಣೆ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು .

ಸೂರಿಕುಮೇರು  ಬೊರಿಮಾರ್ ಸೈಂಟ್ ಜೋಸೆಫ್ ಚರ್ಚ್  ನ  ಆಶ್ರಯದಲ್ಲಿ  ದ್ವಿತೀಯ ಪಿಯುಸಿಯಲ್ಲಿ  ಅತ್ಯುನ್ನತ ಅಂಕಪಡೆದ  ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯರಾದ ಅಲಿಸಿಯಾ  ಲೀಮಾ ಪಿರೇರಾ(ವಾಣಿಜ್ಯ97.3) ಹಾಗೂ ಮೆಲಿಟಾ ಪಾಯ್ಸ್ (ವಿಜ್ಞಾನ 95.16) ರನ್ನು ಅಭಿನಂದಿಸಿ ಅವರು ಮಾತನಾಡಿದರು.

ಜಾಹೀರಾತು

ನಮ್ಮ ಚರ್ಚ್ ವ್ಯಾಪ್ತಿಯ ಈ ಇಬ್ಬರು ವಿದ್ಯಾರ್ಥಿನಿಯರ ಸಾಧನೆ ನಮ್ಮ ಚರ್ಚ್ ಗೂ ಕೀರ್ತಿಯನ್ನು ತಂದಿದೆ, ಚರ್ಚ್ ನ ವೈಸಿಎಸ್ ಘಟಕದ ಅಧ್ಯಕ್ಷ,ಪದಾಧಿಕಾರಿಗಳ ಹುದ್ದೆಯನ್ನೂ ಇಬ್ಬರು ವಿದ್ಯಾರ್ಥಿನಿಯರು  ಸೇವಾ ಮನೋಭಾವನೆಯಿಂದ ನಿರ್ವಹಿಸುತ್ತಿದ್ದು, ಇವರ ಶ್ರಮಕ್ಕೆ ಸಿಕ್ಕ ಗೌರವ ಇದಾಗಿದೆ ಎಂದು ಫಾದರ್ ಗ್ರೆಗರಿ ಹೇಳಿದರು.

ಜಾಹೀರಾತು

 ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ  ಎಲಿಯಾಸ್ ಪಿರೇರಾ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಶುಭಾಹಾರೈಸಿದರು.   ವಿದ್ಯಾರ್ಥಿನಿ ಅಲಿಸಿಯಾ ಳ‌ ತಂದೆ ಅವಿಲ್ ಹಾಗೂ ತಾಯಿ ಲೀಡಿಯಾ ಪಿರೇರಾ, ವಿದ್ಯಾರ್ಥಿನಿ ಮೆಲಿಟಾ ತಂದೆ ಮಾರ್ಸೆಲ್ , ತಾಯಿ ಲೀನಾ ಪಾಯ್ಸ್ ಮಕ್ಕಳ ಸಾಧನೆ ಕುರಿತು ಹೆಮ್ಮೆ ಇದೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ರವರೂ ಕೂಡ ನಮ್ಮ ಮಕ್ಕಳಿಗೆ ದೂರವಾಣಿ ಮೂಲಕ ಅಭಿನಂದಿಸಿ ಶುಭಹಾರೈಸಿರುವುದು ಖುಷಿ ಕೊಟ್ಟಿದೆ ಎಂದರು.    ಚರ್ಚ್  ಪಾಲನಾ‌ ಸಮಿತಿ  ಕಾರ್ಯದರ್ಶಿ ಮೇರಿ ಡಿ’ಸೋಜ,   ಸೂರಿಕುಮೇರು ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್  ಮುಖ್ಯಶಿಕ್ಷಕಿ ಸಿಸ್ಟರ್ ಲೊವಿಟಾ, ಸ್ಟೀವನ್ ಪಾಯ್ಸ್,  ಅನಿತಾ ರೋಶನ್ ಮಾರ್ಟಿಸ್ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್ ಕಾರ್ಯಕ್ರಮ ‌ನಿರ್ವಹಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ