ಬಂಟ್ವಾಳ

ಪಿಯುಸಿ ಫಲಿತಾಂಶ: ಬಿಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್

ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ 78% ಫಲಿತಾಂಶ ಪಡೆದಿದ್ದು, ಒಟ್ಟು ಶೇಕಡಾ 86 ಫಲಿತಾಂಶ ದಾಖಲಿಸಿರುತ್ತದೆ.

ಜಾಹೀರಾತು

ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ, ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಆಶ್ವಿತಾ 566 ಅಂಕಗಳು (ಅರ್ಥಶಾಸ್ತ್ರ 100) ದೀಪ್ತಿ ಎನ್. 551 ಅಂಕಗಳು (ಲೆಕ್ಕಶಾಸ್ತ್ರ 100), ಗೌರವ್ 550 ಅಂಕಗಳು (ಇತಿಹಾಸ 100) ಹಾಗೂ ನವ್ಯ 550 ಅಂಕಗಳನ್ನು ಪಡೆದಿರುತ್ತಾರೆ.  ಕಲಾ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಫಾತಿಮತ್ ನಿಶಾ 547 ಅಂಕಗಳು (ಇತಿಹಾಸ 100), ಫಾತಿಮತ್ ಫರ್ವೀನಾ 537 ಅಂಕಗಳು (ಇತಿಹಾಸ 100), ಹಾಗೂ ಆಯಿಶತುಲ್ ಜಿಸ್ತಿಯಾ 528 ಅಂಕಗಳನ್ನು ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಮುರ್ಷಿದಾ ಬಾನು 522 ( ಗಣಿತ 100  ಅಂಕಗಳು), ಭವಿತ್ 516 ಅಂಕಗಳು ಹಾಗೂ ಮಹಮ್ಮದ್ ಆಸಿರ್ 512 ಅಂಕಗಳನ್ನು ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ  73 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 57 ವಿದ್ಯಾರ್ಥಿಗಳು ಉತ್ತೀರ್ಣ, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 73 ವಿದ್ಯಾರ್ಥಿಗಳು ಉತ್ತೀರ್ಣ ಹಾಗೂ ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ