ಬಂಟ್ವಾಳ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸೋಮವಾರ ಕಂಡುಬಂದರೆ, ಬಿ.ಸಿ.ರೋಡಿನಲ್ಲಿ ಜನದಟ್ಟಣೆ ಇತ್ತು. ಲಾಕ್ ಡೌನ್ ವದಂತಿಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನ ಹೊತ್ತು ದಿನಸಿ, ಮೆಡಿಕಲ್, ಬೇಕರಿ ಅಂಗಡಿಗಳ ಮುಂದೆ ಸಾಲು ಕಂಡುಬಂತು. ನಾಳೆ ಎಲ್ಲ ಬಂದ್ ಆಗ್ತದಾ ಎಂಬ ಮಾತಿನೊಂದಿಗೆ ವ್ಯವಹರಿಸುತ್ತಿದ್ದ ಜನರು ಕಂಡುಬಂದರೆ, ಇಡೀ ಬಿ.ಸಿ.ರೋಡಿನಲ್ಲಿ ವಾಹನಗಳು ಅಲ್ಲಲ್ಲಿ ಪಾರ್ಕ್ ಮಾಡಿ, ಟ್ರಾಫಿಕ್ ಜಾಮ್ ಗೂ ಕಾಣಿಕೆ ನೀಡಿದವು.
ಮೊದಲೇ ಅಗಲಕಿರಿದಾದ ಬಂಟ್ವಾಳ ಪೇಟೆಯಲ್ಲಿ ಸೋಮವಾರ ಬೆಳಗ್ಗಿನ ಪೀಕ್ ಅವರ್ ವಾಹನಗಳ ಸಂಚಾರ ಇತ್ತು. ಗ್ರಾಮೀಣ ಭಾಗದ ಜನರು ತಮ್ಮ,ತಮ್ಮ ವಾಹನದಲ್ಲಿ ಮತ್ತು ಬಾಡಿಗೆ ವಾಹನದ ಮೂಲಕ ಅಗತ್ಯ ಸಾಮಾಗ್ರಿ ಖರೀದಿ,ಬ್ಯಾಂಕ್ ವ್ಯವಹಾರಕ್ಕಾಗಿ ಪೇಟೆಗೆ ಅಗಮಿಸಿದ್ದು ,ಇದರಿಂದಾಗಿ ವಾಹನ ಸಂಚಾರದ ಒತ್ತಡ ಹೆಚ್ಚಾಗಿತ್ತು.