ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2361 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪೈಕಿ ಇಂದು 131 ಮಂದಿ ಸೇರಿದ್ದಾರೆ. ಈಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 1467. ಒಟ್ಟು 844 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ ಪೈಕಿ ILI – 63,ಸಂಪರ್ಕವೇ ಪತ್ತೆಯಾಗದ 38, ಪ್ರಾಥಮಿಕ ಸಂಪರ್ಕದಿಂದ 16, SARI – 10, ವಿದೇಶದಿಂದ ಬಂದ 4 ಮಂದಿ ಸೇರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, 70,53,60,70 ವರ್ಷದವರು ಮೃತಪಟ್ಟಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ 9 ಮಂದಿಗೆ ಸೋಂಕು: ಬಂಟ್ವಾಳ ತಾಲೂಕಿನಲ್ಲಿ ಸೋಮವಾರ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪೆರ್ನೆ, ಕಾರಿಂಜೆ, ಬಿ.ಸಿ.ರೋಡ್ ತಲಪಾಡಿ (2), ಪುದು, ಬಂಟ್ವಾಳ , ಗೋಳ್ತಮಜಲು, ಪಣಿಕಲ್ಲುವಿ,ಮೂಲರಪಟ್ಣದವರು ಸೋಂಕಿತರು. ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿದ್ದು, ಒಟ್ಟಾರೆಯಾಗಿ ಬಂಟ್ವಾಳ ತಾಲೂಕಿನಲ್ಲಿ 100ಕ್ಕೂ ಅಧಿಕ ಮಂದಿಗೆ ಸೋಂಕು ಬಾಧಿಸಿದಂತಾಗಿದೆ.