ಬಂಟ್ವಾಳ: ಪ್ರತಿ ಮಳೆಗಾಲದಲ್ಲಿ ಕೆರೆಗಾತ್ರದ ಹೊಂಡ ಬಿದ್ದು,ವಾಹನಸಂಚಾರಕ್ಕೆ ತೊಡಕಾಗುತ್ತಿದ್ದ ಬಿ.ಸಿ.ರೋಡಿನ ಬಸ್ ತಂಗುದಾಣ ಮತ್ತು ಯಾತ್ರಿನಿವಾಸ್ ಕಟ್ಡಡದ ಮುಂಭಾಗದ ಹೊಂಡಕ್ಕೆ ರಾ.ಹೆ.ಪ್ರಾ.ಗುರುವಾರ ತೇಪೆ ಹಾಕುವ ಕಾರ್ಯ ನಡೆಸಿತು.
ಈ ಬಾರಿಯ ಪ್ರಥಮ ಮಳೆಗೂ ಆದೇ ಜಾಗಗಳಲ್ಲಿ ಕಾಣಿಸಿಕೊಂಡ ಹೊಂಡ ಬಳಿಕ ಕೆರೆಯ ಗಾತ್ರದಲ್ಲಿ ವಿಸ್ತರಿಸಿದೆ. ಪ್ರತಿವರ್ಷವು ಇಲ್ಲಿನ ಅಂಗಡಿದಾರರು ಈ ಹೊಂಡಕ್ಕೆ ಗಿಡ ನೆಟ್ಟು ವಾಹನ ಸವಾರರಿಗೆ ಎಚ್ಚರಿಕೆ ಮೂಡಿಸುತ್ತಿದ್ದರು. ಮಾಧ್ಯಮಗಳು ಕೂಡ ಈ ಎರಡು ಹೊಂಡದ ಬಗ್ಗೆ ವರ್ಷಂಪ್ರತಿ ಯಾಥಾವತ್ತಾಗಿ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆಯುತ್ತಾ ಬರುತ್ತಿದೆ. ಈ ಸಲ ಸಂಚಾರವನ್ನು ಡೈವರ್ಶನ್ ಮಾಡಲಾಗಿದೆ ಎಂದು ಫಲಕವನ್ನು ಹಾಕಲಾಗಿತ್ತು.