ವಿಡಿಯೋಕ್ಕೆ ಇಲ್ಲಿ ಕ್ಲಿಕ್ ಮಾಡಿರಿ
ಕೊರೊನಾ ಸಂದರ್ಭ ಲಾಕ್ ಡೌನ್ ಮಾಡಿದಾಗಲೂ ಬಂಟ್ವಾಳ ತಾಲೂಕಿನ ಕೃಷಿ ಕಾರ್ಯ ಚಟುವಟಿಕೆಗಳು ಹಿಂದೆ ಬಿದ್ದಿಲ್ಲ. ಸಾಮಾನ್ಯವಾಗಿ ಕೋವಿಡ್ ಸಂದರ್ಭ ಕೆಲಸಗಳನ್ನು ಕಳೆದುಕೊಂಡು ಧೃತಿಗೆಡುವ ಸನ್ನಿವೇಶಗಳಿದ್ದಾಗಲೂ ಬಂಟ್ವಾಳದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಉತ್ತಮ ಓಪನಿಂಗ್ ದೊರಕಿದೆ.
4,00,595 ಮಾನವ ದಿನಗಳ ಗುರಿ 2020-21ಕ್ಕೆ ನಿಗದಿಯಾಗಿದ್ದು, ಈಗಾಗಲೇ ತೆರೆದ ಬಾವಿ, ತೋಡುಗಳ ಹೂಳೆತ್ತುವಿಕೆ, ಅಂಗನವಾಡಿ, ಶಾಲೆಗಳ ತೋಟಗಳ ರಚನೆ, ಸ್ವಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಕೆಲಸಗಳು ಆರಂಭಗೊಂಡಿವೆ. ಇದುವರೆಗೆ 44,663 ಮಾನವ ದಿನಗಳ ಕೆಲಸ ನಡೆದಿವೆ. ಎಲ್ಲ ಗ್ರಾಪಂಗಳಲ್ಲಿ ಕಾಯಕಬಂಧುಗಳನ್ನು ನೇಮಿಸಾಗುತ್ತದೆ ಎಂದು ತಾಪಂ ಇಒ ರಾಜಣ್ಣ ಮತ್ತು ಪ್ರಭಾರ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ ತಿಳಿಸಿದ್ದಾರೆ.
ಎನ್.ಆರ್.ಇ.ಜಿ.ಗೆ 2019-20, 20-21ರಲ್ಲಿ ಹೆಸರು ನೋಂದಾಯಿಸಿದವರನ್ನು ಜಿಪಂ ಸಿಇಒ ಡಾ. ಸೆಲ್ವಮಣಿ ಸೂಚನೆಯಂತೆ ವೈಯಕ್ತಿಕವಾಗಿ ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಜಿಪಂ ಉಪಕಾರ್ಯದರ್ಶಿ ಆನಂದ್ ಕುಮಾರ್ ಮತ್ತು ಯೋಜನಾ ನಿರ್ದೇಶಕ ಮಧುಕುಮಾರ್ ಅವರು ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ. ಈ ಬಾರಿ 44,663 ಮಾನವ ದಿನಗಳ ಕೆಲಸ ಈಗಾಗಲೇ ನಡೆದಿವೆ.
ತೆರೆದ ಬಾವಿ 212 ನಿರ್ಮಾಣದ ಗುರಿ ಇದ್ದು, 175 ಪ್ರಗತಿಯಲ್ಲಿದೆ. 149 ತೋಡುಗಳ ಹೂಳೆತ್ತುವಿಕೆ ನಡೆಯಬೇಕಿದ್ದು, 103 ಪ್ರಗತಿಯಲ್ಲಿದೆ. ಬಂಟ್ವಾಳ ವಲಯದ 58, ವಿಟ್ಲ ವಲಯದ 51 ಅಂಗನವಾಡಿಗಳು, ತಾಲೂಕಿನ 70 ಶಾಲೆಗಳಲ್ಲಿ ಪೌಷ್ಟಿಕ ತೋಟ ರಚನಾ ಕಾರ್ಯ ನಡೆಯುತ್ತಿದೆ. ನರೇಗಾ ಜೊತೆ ಎನ್.ಆರ್.ಎಲ್.ಎಂ. (ರಾಷ್ಟ್ರೀಯ ಜೀವನೋಪಾಯ ಅಭಿಯಾನ) ಸಂಜೀವಿನಿಯ ಒಗ್ಗೂಡಿಸುವಿಕೆಯಿಂದ ತೆಂಗು, ಅಡಕೆ, ಗೇರು, ಮಾವು, ದಾಳಿಂಬೆ, ಕೊಕ್ಕೊ, ಅಂಗಾಂಶ ಬಾಳೆ, ಪಪ್ಪಾಯ ಇತ್ಯಾದಿ ಬೆಳೆ ಕುರಿತ ಕೆಲಸಗಳನ್ನು ಸಂಬಂಧಿಸಿ ಸ್ವಸಹಾಯ ಸಂಘ, ಒಕ್ಕೂಟಗಳ ಮೂಲಕ ನಡೆಸಲಾಗುತ್ತಿದೆ ಹೆಚ್ಚಿನ ಪಂಚಾಯಿತಿಗಳು ನಿಗದಿತ ಗುರಿಯನ್ನು ತಲುಪಲಿವೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ.
www.bantwalnews.com Editor: Harish Mambady Phone: 9448548127