ಕ್ವಾರಂಟೈನ್ ಕೇಂದ್ರದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂದೇಶ್ ಶೆಟ್ಟಿ( 34) ಸಾವನ್ನಪ್ಪಿದವರು. ಭಾರತೀಯ ಸೇನೆಯಲ್ಲಿ 14 ವರ್ಷಗಳಿಂದ ಯೋಧರಾಗಿದ್ದ ಸಂದೇಶ್ ಶೆಟ್ಟಿ, ರಜೆಯಲ್ಲಿ ಊರಿಗೆ ಬಂದವರು ಕಳೆದ ಸೋಮವಾರ ಕರ್ತವ್ಯಕ್ಕೆ ಹಿಂದಿರುಗಿದ್ದರು. ಸೋಮವಾರ ಊರಿಗೆ ಅವರ ಪಾರ್ಥಿವ ಶರೀರ ಆಗಮಿಸುವ ನಿರೀಕ್ಷೆ ಇದೆ. ತಂದೆ, ತಾಯಿ, ತಮ್ಮ, ಅಣ್ಣ ಮತ್ತು ತಂಗಿಯನ್ನು ಅವರು ಅಗಲಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…