ಸಿಪಿಐ ರಾಜ್ಯ ನಾಯಕ, ಮಾಜಿ ಶಾಸಕ ಎಐಟಿಯುಸಿ ಪೋಷಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ಧ ನ್ಯಾಯವಾದಿ ಎಂ ಸಿ ನರಸಿಂಹನ್ ನಿಧನ ಹಿನ್ನೆಲೆಯಲ್ಲಿ ಸಿಪಿಐ ಹಾಗೂ ಎಐಟಿಯುಸಿ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ನುಡಿ-ನಮನ ಸಭೆ ಇತ್ತೀಚೆಗೆ ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಜರುಗಿತು.
ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿ ಎಂ.ಸಿ.ಎನ್ ರವರು ತನ್ನ ಜೀವನದುದ್ದಕ್ಕೂ ಕಾರ್ಮಿಕ ವರ್ಗದ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು ಎಂದರು. ಸಿಪಿಐ ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಸಿಪಿಐ ಜಿಲ್ಲಾ ಮುಂದಾಳು ಎಂ.ಕರುಣಾಕರ್, ಎಐಟಿಯುಸಿ ಮುಂದಾಳು ಬಿ.ನಾರಾಯಣ, ಸಾಮಾಜಿಕ ನ್ಯಾಯ ಪರ ಸಮಿತಿ ಮುಂದಾಳು ಪ್ರಭಾಕರ ದೈವಗುಡ್ಡೆ, ರಾಜಾ ಚಂಡ್ತಿಮಾರ್ ಮೊದಲಾದವರು ನುಡಿನಮನ ಸಲ್ಲಿಸಿದರು. ಸಿಪಿಐ ಜಿಲ್ಲಾ ಮುಂದಾಳು ಸುರೇಶ್ ಕುಮಾರ್ ಬಂಟ್ವಾಳ್ ವಂದಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…