ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕವಾದ ಕೆ. ಹರಿಕೃಷ್ಣ ಬಂಟ್ವಾಳ ಶನಿವಾರ ಮಧ್ಯಾಹ್ನ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಕಚೇರಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಅಭಿನಂದಿಸಲಾಯಿತು.
ಶಾಸಕ ರಾಜೇಶ್ ನಾಯ್ಕ್ ಅವರು ಹಾರ ಹಾಕಿ ಶಾಲು ಹೊದೆಸುವ ಮೂಲಕ ಹರಿಕೃಷ್ಣ ಬಂಟ್ವಾಳರವರನ್ನು ಅಭಿನಂದಿಸಿದರು. ಹಿರಿಯ ರಾಜಕಾರಿಣಿಯಾಗಿದ್ದು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸವನ್ನು ಮಾಡಿ ಪ್ರಸ್ತುತ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ಅಧ್ಯಕ್ಷರಾಗಿ ನೇಮಕವಾಗಿದ್ದು ಅತೀವ ಸಂತೋಷವಾಗಿದೆ. ಇವರು ಇನ್ನಷ್ಟು ಅಭಿವೃದ್ಧಿಯ ಕೆಲಸವನ್ನು ವಿದ್ಯುನ್ಮಾನ ನಿಗಮದಲ್ಲಿ ಮಾಡಲಿ ಎಂದು ಶುಭ ಹಾರೈಸುತ್ತೇನೆ. ಇವರ ನೇಮಕಕ್ಕೆ ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜಾಧ್ಯಕ್ಷ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಈ ಸಂಧರ್ಭ ಬೂಡ ಅದ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ, ಪ್ರಮುಖರರಾದ ಸೀತಾರಾಮ ಪೂಜಾರಿ, ರಮನಾಥ ರಾಯಿ, ಮನೋಜ್ ಕಳ್ಳಿಗೆ, ಪುಷ್ಪರಾಜ್ ಚೌಟ, ಶ್ರೀಕಾಂತ್ ಶೆಟ್ಟಿ, ಪ್ರವೀಣ್ ಗಟ್ಟಿ, ಯಶವಂತ ನಾಯ್ಕ ನಗ್ರಿ, ಪುರುಷೋತ್ತಮ, ನಿತ್ಯಪ್ರಕಾಶ್ ಬಂಟ್ವಾಳ ಮತ್ತಿತರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…