ಲಾಕ್‌ಡೌನ್ ಪರಿಣಾಮದಿಂದ ಸಂಕಷ್ಟಕ್ಕೊಳಗಾಗಿರುವ ಬೀಡಿ ಕಾರ್ಮಿಕರಿಗೆ ಕನಿಷ್ಠ ತಲಾ 10 ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು ಬುಧವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಕಳೆದ ವರ್ಷದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳ ಮಂಜೂರು ಆದೇಶ ನೀಡಿದರೂ, ಕೇವಲ 2 ಲಕ್ಷ ರೂ. ಮಾತ್ರ ಸರಕಾರಿಂದ ಪಾವತಿಯಾಗಿದೆ. ಉಳಿದ ೩ ಲಕ್ಷ ರೂ.ಗಳನ್ನು ಸರಕಾರ ತತ್‌ಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿ ನೀಡುವ ವೇಳೆ ಸಮಿತಿಯ ಸಂಚಾಲಕರಾದ ಬಿ.ಶೇಖರ್, ಪ್ರಭಾಕರ ದೈವಗುಡ್ಡೆ, ರಾಮಣ್ಣ ವಿಟ್ಲ, ರಾಜಾ ಚಂಡ್ತಿಮಾರ್, ಹರೀಶ್ ಅಜ್ಜಿಬೆಟ್ಟು, ವಿವಿಧ ಸಂಘಟನೆಗಳ ಪ್ರಮುಖರಾದ ಲೋಕೇಶ್ ಸುವರ್ಣ, ಹಾರೂನ್ ರಶೀದ್, ಇಸ್ಮಾಯಿಲ್, ಶಫೀಕ್ ಆಲಡ್ಕ, ಸರೋಜಿನಿ ನೋರ್ನಡ್ಕ, ಬಿ.ಬಾಬು ಭಂಡಾರಿ, ಸುರೇಂದ್ರ ಪೂಜಾರಿ ಬಂಟ್ವಾಳ, ಎಂ.ಬಿ.ಭಾಸ್ಕರ್, ವಿನ್ಸೆಂಟ್ ರೊಡ್ರಿಗಸ್, ಸುಂದರ ಪೂಜಾರಿ ಸಿದ್ಧಕಟ್ಟೆ ಮೊದಲಾದವರಿದ್ದರು.
www.bantwalnews.com Editor: Harish Mambady For Advertisements contact: 9448548127
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…