ವಿಟ್ಲ

ವಿಟ್ಲಕ್ಕೆ ಜನೌಷಧಿ ಕೇಂದ್ರ ಮಂಜೂರು ಮಾಡುವಂತೆ ಡಿ.ವೈ.ಎಫ್.ಐ ಆಗ್ರಹ

ಜಾಹೀರಾತು

ಕೇಂದ್ರ ಸರ್ಕಾರ ಜನರಿಗೆ ಕಡಿಮೆ ಬೆಲೆಗೆ ಔಷಧಗಳನ್ನು ದೊರಕಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲ್ಲ ಪಟ್ಟಣಗಳಲ್ಲಿ ಆರಂಭಿಸಿರುವ ಜನೌಷಧಿ ಕೇಂದ್ರವನ್ನು ವಿಟ್ಲದಲ್ಲೂ ಆರಂಭಿಸುವಂತೆ ಡಿವೈಎಫ್ ಐ ಒತ್ತಾಯಿಸಿದೆ.

ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡಕಚೇರಿ ಉಪ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಅಧ್ಯಕ್ಷರಾದ ನಿಜುಂ ಅಳಿಕೆ, ಮುಖಂಡರಾದ ತಮೀಮ್.ಎಂ.ಕೆ , ಜಲೀಲ್ ಅಳಿಕೆ ಮುಂತಾದವರು ಇದ್ದರು.

ಏಕೆ ಬೇಕು: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ತಾಲೂಕಿಗೆ ಅರ್ಹತೆ ಇರುವ ಪಟ್ಟಣವಾಗಿದೆ, ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ನಿಂದ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೊಂಡಿರುತ್ತದೆ. ವಿಟ್ಲ ಪಟ್ಟಣವನ್ನು ಆಸುಪಾಸಿನ ಹಲವಾರು ಊರುಗಳ ಜನ ಆಶ್ರಯಿಸಿಕೊಂಡಿರುತ್ತಾರೆ, ಅಲ್ಲದೆ ಹೆಚ್ಚಿನ ಜನವಸತಿ ಇರುವ ಪಟ್ಟಣವಾಗಿದೆ. ಕೇಂದ್ರ ಸರಕಾರ ಜನರಿಗೆ ಕಡಿಮೆ ಬೆಲೆಗೆ ಔಷಧಿಗಳನ್ನು ದೊರಕಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ  ಪಟ್ಟಣಗಳಲ್ಲಿ ಜನೌಷಧಿ ಕೆಂದ್ರಗಳನ್ನು ಮಂಜೂರು ಮಾಡಿರುತ್ತದೆ ಆದರೆ ವಿಟ್ಲದ ಜನತೆಗೆ ಇದರ ಪ್ರಯೋಜನ ಪಡೆಯಲು ಕಷ್ಟಸಾದ್ಯವಾಗಿದೆ. ವಿಟ್ಲದಲ್ಲಿ ಈಗಾಗಲೇ ಒಂದು ಜನೌಷಧಿ ಕೇಂದ್ರ ಇದ್ದರೂ ಅದು ಖಾಸಗಿ ಮೆಡಿಕಲ್ ಜೊತೆಯಲ್ಲೆ ಇದ್ದು ಇಲ್ಲಿ ಜನರಿಗೆ ಬೇಕಾದ ಔಷಧಿಗಳು ಕೆಲ ಸಂದರ್ಭ ಲಭ್ಯವಿರುವುದಿಲ್ಲ. ಇಂದು ಜನರಿಗೆ ದುಬಾರಿ ಬೆಲೆ ನೀಡಿ ಔಷಧಗಳನ್ನು ಖರೀಧಿಸಲು ಕಷ್ಟಸಾದ್ಯವಾಗಿದೆ, ಸರಕಾರವು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಜನೌಷಧಿ ಯೋಜನೆಯನ್ನು ಜಾರಿಗೊಳಿಸಿದ್ದು ಆದರೆ ವಿಟ್ಲದ ಜನತೆಗೆ ಇದರ ಪ್ರಯೋಜನ ಮರೀಚಿಕೆಯಾಗಿದೆ. ವಿಟ್ಲದ ಜನತೆಗೂ ಕಡಿಮೆ ಬೆಲೆಗೆ ಔಷಧಿ ದೊರಕುವಂತಾಗಲು ವಿಟ್ಲ ಪಟ್ಟಣಕ್ಕೆ ಒಂದು ಪ್ರತ್ಯೇಕ ಜನೌಷಧಿ ಕೇಂದ್ರವನ್ನು ಮಂಜೂರು ಮಾಡಬೇಕೆಂದು ಈ ಹಿನ್ನೆಲೆಯಲ್ಲಿ ಒತ್ತಾಯಿಸಲಾಗುತ್ತಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

19 hours ago