ಬಂಟ್ವಾಳ ತಾಲೂಕಿನ ಮನೆಯೊಂದಕ್ಕೆ ಗುರುವಾರ ಬಂದ ಹೆಬ್ಬಾವಿನ ಬಣ್ಣ ಬಿಳಿ. ಗುರುವಾರ ಕಾವಳಕಟ್ಟೆ ಎಂಬಲ್ಲಿ ನೌಶಾದ್ ಎಂಬವರ ಮನೆಯೊಂದಕ್ಕೆ ಬಿಳಿ ಬಣ್ಣದ ಹೆಬ್ಬಾವು ನುಗ್ಗಿತು. ಗಲಿಬಿಲಿಗೊಂಡ ಮನೆಯವರು ಕೂಡಲೇ ಅವರ ಸ್ನೇಹಿತ ಆಶೀಫ್ ಅವರಿಗೆ ಕರೆ ಮಾಡಿದಾಗ ಅವರು ಉರಗತಜ್ಞ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದರು. ಕೂಡಲೇ ಆಗಮಿಸಿದ ಸ್ನೇಕ್ ಕಿರಣ್ ಸ್ನೇಹಿತರಾದ ನಿತ್ಯಪ್ರಕಾಶ್ ಬಂಟ್ವಾಳ, ಶ್ರೀಪ್ರಸಾದ್ ಜೊತೆ ಅದನ್ನು ಹಿಡಿದು ವಲಯಾರಣ್ಯಾಧಿಕಾರಿ ಶ್ರೀಧರ್ ಅವರಿಗೆ ನೀಡಿದ್ದು, ಅದನ್ನು ಬಳಿಕ ಸುರಕ್ಷಿತವಾಗಿ ಮಂಗಳೂರು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಯಿತು.