ರಾಜ್ಯದಲ್ಲಿ ಒಂದೇ ದಿನ 115 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ ಉಡುಪಿಯಲ್ಲಿ 29, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಪ್ರಕರಣಗಳು. ಒಂದೇ ದಿನ ದಕ್ಷಿಣ ಕನ್ನಡದಲ್ಲಿ 24 ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು. ಇವತ್ತು 53 ರೋಗಿಗಳು ರಾಜ್ಯದಲ್ಲಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,. ಒಟ್ಟು 834 ಗುಣಮುಖರಾದಂತಾಗಿದೆ. ಆದರೆ 1650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕಂಡುಬಂದ ಹೊಸ ಪ್ರಕರಣಗಳ ಪೈಕಿ 95 ಅಂತಾರಾಜ್ಯ ಪ್ರಯಾಣಿಕರಾದರೆ, 2 ವಿದೇಶಿ ಪ್ರಯಾಣಿಕರು. ಒಟ್ಟು 2533 ಪ್ರಕರಣಗಳು ಇದುವರೆಗೆ ರಾಜ್ಯದಲ್ಲಿ ದಾಖಲಾಗಿವೆ.
ಉಡುಪಿ 29, ದಕ್ಷಿಣ ಕನ್ನಡ 24, ಹಾಸನ 13, ಬೀದರ್ 12, ಬೆಂಗಳೂರು 9, ಯಾದಗಿರಿ 7, ಚಿತ್ರದುರ್ಗ 6, ಕಲಬುರ್ಗಿ 5, ಹಾವೇರಿ 4, ಚಿಕ್ಕಮಗಳೂರು 3, ವಿಜಯಪುರ 2, ರಾಯಚೂರು 1 ಪ್ರಕರಣಗಳು ಇಂದು ದಾಖಲಾಗಿವೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಗರಿಷ್ಠ ಪ್ರಮಾಣದಲ್ಲಿ ಪತ್ತೆಯಾಗಿದೆ. ಇಂದು ಒಟ್ಟು 24 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬೆಳಗ್ಗೆ 6 ಮಂದಿಗೆ ಬಂದದ್ದು ವರದಿಯಾದರೆ, ಸಂಜೆ 18 ಮಂದಿಯ ಪ್ರಕರಣ ವರದಿಯಾಯಿತು. 23 ಮಂದಿ ಮಹಾರಾಷ್ಟ್ರದಿಂದ ಬಂದವರು. ಒಬ್ಬರು ಕೇರಳದಿಂದ ಬಂದವರು. ಎಲ್ಲರೂ ಜಿಲ್ಲೆಯ ವಿವಿಧೆಡೆ ಕ್ವಾರಂಟೈನ್ ನಲ್ಲಿ ಇದ್ದವರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…