ಬಂಟ್ವಾಳ: ತುಂಬೆಯಲ್ಲಿ ದೇವಸ್ಥಾನದ ಅರ್ಚಕರು, ದೈವಸ್ಥಾನದ ಚಾಕರಿ ವರ್ಗದವರಿಗೆ ಆಹಾರ ಕಿಟ್ ಗಳನ್ನು ಇಸ್ಕಾನ್ ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿತರಿಸಿದರು.
ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ತುಂಬೆ, ಕೊಡ್ಮಾಣ್, ನೆತ್ತರಕೆರೆ ಪರಿಸರದ ದೇವಸ್ಥಾನಗಳ ಅರ್ಚಕ ವರ್ಗ ಹಾಗು ದೈವಸ್ಥಾನದ ಚಾಕರಿ ವರ್ಗದವರಿಗೆ ಇಸ್ಕಾನ್ ನ ಅಕ್ಷಯ ಪಾತ್ರೆ ಫೌಂಡೇಶನ್ ಅವರು ಕೊಡಮಾಡಿದ ಜೀವನಾವಶ್ಯಕ ಆಹಾರ ವಸ್ತುಗಳ ಕಿಟ್ ಅನ್ನು ನೀಡಲಾಯಿತು. ಅಕ್ಷಯ ಪಾತ್ರೆ ಫೌಂಡೇಶನ್ ನ ಕಾರುಣ್ಯಾದಾಸ್ ಸ್ವಾಮೀಜಿ, ರಾಧಾದಾಸ್ ಸ್ವಾಮೀಜಿ , ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ , ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಲತಾ ಪೂಜಾರಿ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಂತೋಷ್ ನೆತ್ತರಕೆರೆ ,ಎಪಿಎಂಸಿ ಸದಸ್ಯ ವಿಠ್ಠಲ್ ಸಾಲ್ಯಾನ್, ಬಿಜೆಪಿ ಮುಖಂಡರುಗಳಾದ ಹೇಮಂತ್ ಶೆಟ್ಟಿ, ಸೋಮಪ್ಪ ಕೋಟ್ಯಾನ್, ಯಶವಂತ ಅಮೀನ್, ಮೊಹಮ್ಮದ್ ಅಸ್ಗರ್, ಪ್ರಕಾಶ್ ಸಿಂಫೋನಿ, ಚಂದ್ರಹಾಸ್ ಅಡ್ಯಂತಾಯ, ಮೋಹನ್ ರಾಜ್ ಕೆ ಆರ್ , ಸಚಿನ್ ಮೊರೆ, ಮನೋಜ್ ಆಚಾರ್ಯ, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರವೀಣ್ ಶೆಟ್ಟಿ ಸುಜೀರ್, ಜಯಶ್ರೀ ಕರ್ಕೇರ, ಮನೋಹರ್ ಪೆರ್ಲಕ್ಕೆ, ವಿಜಯ ಕಜೆಕಂಡ ಮತ್ತಿತರರು ಉಪಸ್ಥಿತರಿದ್ದರು