ನಿಮ್ಮ ಧ್ವನಿ

ಆತ್ಮ ನಿರ್ಭರತೆ ಎಂದರೇನು?

  • ರಾಜಮಣಿ ರಾಮಕುಂಜ


ಒಬ್ಬ ಪರಿಣಾಮಕಾರಿ ಆಡಳಿತದಾರ ದೇಶದ ಪ್ರಗತಿಯಲ್ಲಿ ಸಾರ್ವಜನಿಕ ಪಾಲುದಾರಿಕೆಯನ್ನೂ ಬಯಸುತ್ತಾನೆ; ತಾನು ಮುಂದುವರಿಯುವದರೊಂದಿಗೆ ಇತರರನ್ನೂ ತನ್ನ ವ್ಯಕ್ತಿತ್ವ ಮಾತ್ರದಿಂದ ಸೆಳೆಯುತ್ತಾನೆ. ಇಂತಹ ಸಂದರ್ಭಗಳಲ್ಲಿ ಆತ್ಮಾವಲೋಕನ ಆತ್ಮದ ಅರಿವು ಆತ್ಮಸ್ಥೈರ್ಯ ಇವೆಲ್ಲವನ್ನೂ ಜಾಗೃತಗೊಳ್ಳುವಂತೆ ಪರಿಸರವನ್ನು ನಿರ್ಮಣಮಾಡಬೇಕಾಗುತ್ತದೆ. ಇದನ್ನು ನೀವು ಅಧ್ಯಾತ್ಮವಾದವೆನ್ನಿ ಲೌಕಿಕವಾದವೆನ್ನಿ; ಇದು ಆತ್ಮ ನಿರ್ಭರ.

courtesy: Internet

ಕೊರೊನದಿಂದ ಮುದುಡಿ ನಿರಾಶರಾದ ಮಂದಿಗೆ ನಿಮ್ಮ ಮಿಡಿತ ನಿಮ್ಮ ದುಡಿತ, ಅದು ಸ್ವಾವಲಂಬಿ ಬದುಕಿಗಾಗಿ ಸ್ವದೇಶಿ ಮಂತ್ರ. ತಮ್ಮನ್ನೇ ತಾವು ಮರೆತ ಜನತೆಗೆ ಅವರವರ ಶಕ್ತಿ ಸಾಮರ್ಥ್ಯಗಳು ಪುಟಿದೇಳುವಂತೆ ಮಾಡುವ ಪ್ರಧಾನಿಯವರ ಅನುಷ್ಠಾನ ಯೋಗ್ಯ ಪರಿಣಾಮಕಾರಿ ಮಾತುಗಳು ಆತ್ಮಸ್ಥೈರ್ಯವನ್ನು ತುಂಬುವಂತಹದ್ದು. ಘೋಷಿತವಾದ ಇಪ್ಪತ್ತು ಲಕ್ಷ ಕೋಟಿಯನ್ನು ಹಣದ ರೂಪದಲ್ಲಿ ಮಾಪನ ಮಾಡುವುದಲ್ಲ, ನಿರಾಶೆ ಹೊಂದಿದ ಮನಸ್ಸನ್ನು ಆತ್ಮ ಸ್ಥೈರ್ಯವನ್ನು ತುಂಬಿ ದೇಶ ಕಟ್ಟುವ ಕಾಯಕಕ್ಕೆ ಸಿದ್ದಗೊಳಿಸುವ ಇರಾದೆಯಿದು. ಇದು ನಾಯಕನೊಬ್ಬ ಇಡೀ ಸಮುದಾಯಕ್ಕೆ ಮಾಡಬಹುದಾದ ಬಹುದೊಡ್ಡ ಕಾರ್ಯ.

ಮೊದಲು ಜನಗಳ ಮನಸ್ಸನ್ನು ಗುಣಾತ್ಮಕವಾಗಿ ಕಟ್ಟಬೇಕು, ನಂತರ ದೇಶ ಕಟ್ಟುವ ಕಾಯಕ. ಕೊರೊನ ದಬ್ಬಾಳಿಕೆ ಮಾತ್ರವಲ್ಲ ನಮ್ಮನ್ನು ನಾವು ಸದ್ಬಳಕೆಮಾಡಿಕೊಳ್ಳುವಲ್ಲೂ ಎಚ್ಚರಿಸಿದೆ. ಈಗ ನಾವು ಎಚ್ಚತ್ತುಕೊಳ್ಳಬೇಕು, ಇಸಂ ಅಹಂ ಬಿಡಬೇಕು. ಎಲ್ಲರ ಬೇಡಿಕೆಯನ್ನು ಆಯಾಯ ವರ್ಗದ ಜನಗಳನ್ನು ವಿಭಾಗ ಮಾಡಿ ಈಡೇರಿಸುವುದು ಸಾಧ್ಯವಿಲ್ಲ, ಎಲ್ಲರಿಗೂ ಅವಶ್ಯಕವಾದುದನ್ನು ಈಡೇರಿಸುವುದು ದೀರ್ಘ ಕಾಲದಲ್ಲಿಉತ್ತಮ ಫಲಿತಾಂಶವನ್ನೇ ನೀಡುತ್ತದೆ. ಬೆಳಕು ಚೆಲ್ಲಿಯಾಗಿದೆ, ಬೆಳಕಿನ ದಾರಿಯಲ್ಲಿ ಮುನ್ನೆಡೆಯುವುದು ನಮ್ಮ ಜವಾಬ್ದಾರಿ. ಸ್ವಯಂ ಘೋಷಿತ ಸಂಭಾವಿತರಿಗೆ, ಲಕ್ಷದ ಮೇಲೆ ಲಕ್ಷ್ಯವಿಟ್ಟ್ವರಿಗೆ ಮತ್ತು ನಾಯಕನ ಕನ್ನಡಕ, ಆತ ಧರಿಸುವ ದಿರಸು ಇತ್ಯಾದಿಗಳ ಕುರಿತು ತಲೆ ಕೆಡಿಸಿಕೊಳ್ಳುವವರಿಗೆ ಈ ವಾಸ್ತವ ಅಥವಾ ನಾಯಕನ ಮಾತು ಹಾಗೂ ಘೋಷಿತ ಆರ್ಥಿಕ ಪ್ಯಾಕೇಜಿನ ಹಿನ್ನೆಲೆ ಅರ್ಥವಾಗಲಿಕ್ಕಿಲ್ಲ. ಬದಲಾದ ಕಾಲಕ್ಕೆ ಕೊರೊನವನ್ನು ಎದುರಿಸುತ್ತಲೇ ಜೀವನವನ್ನು ಹೊಂದಿಸಿಕೊಂಡು ದೇಶವನ್ನು ಕಟ್ಟುವ ತುರ್ತು ಇಂದಿನದ್ದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ