ಕಾಲ್ನಡಿಗೆಯಲ್ಲಿ ಮಂಗಳವಾರ ಮಧ್ಯರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರು ಯಾರು ಹೇಳಿದರೂ ಕೇಳದೆ ಮುಂದುವರಿಯುತ್ತಿದ್ದ ಸಂದರ್ಭ ಫರಂಗಿಪೇಟೆ, ತುಂಬೆಯಲ್ಲಿ ಸ್ಥಳೀಯರು ಹಣ್ಣುಹಂಪಲು, ಆಹಾರ ನೀರು ವಿತರಿಸುವ ಮೂಲಕ ನೆರವಾದರು.1000ರಿಂದ 1100ರಷ್ಟಿದ್ದ ಜಾರ್ಖಂಡ್ ವಲಸೆ ಕಾರ್ಮಿಕರ ಗುಂಪೊಂದು ಮಕ್ಕಳ ಸಹಿತ ಗಂಟು ಮೂಟೆಗಳನ್ನು ಹೊತ್ತು ಬಸವಳಿದ ಸಂದರ್ಭ ಸ್ಥಳೀಯ ಮುಖಂಡರಾದ ಹಾಶಿರ್ ಪೇರಿಮಾರ್, ಸಲೀಂ ಕುಂಪನಮಜಲು, ನಝೀರ್ ಹತ್ತನೇ ಮೈಲಿಗಲ್ಲು, ಇರ್ಫಾನ್ ತುಂಬೆ, ಝಹೂರ್, ಮೂಸಬ್ಬ ಅವರು ನೆರವಾದರು.