ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
ಬಂಟ್ವಾಳ: ವಿದ್ಯುತ್ ಬಿಲ್ ಸಂಬಂಧಿಸಿ ಮೆಸ್ಕಾಂ ಅನುಸರಿಸುತ್ತಿರುವ ನೀತಿಗೆ ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಖಂಡಿಸಿದ್ದಾರೆ. ಇದನ್ನು ತಕ್ಷಣ ರದ್ದುಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿರುವ ಅವರು, ಸರಿಪಡಿಸದೇ ಇದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕೊರೊನಾ ವೈರಸ್ ನಿಂದ ತತ್ತರಿಸಿ ಲಾಕ್ ಡೌನ್ ಆದೇಶ ಜಾರಿಯಾದ ದಿನದಿಂದ ಸಾರ್ವಜನಿಕರು ತಮ್ಮ 2 ತಿಂಗಳ ಗೃಹವಿದ್ಯುತ್ ಬಿಲ್ ಮನ್ನಾ ಮಾಡುವಂತೆ ತಿಳಿಸಿದ್ದರು. ಆದರೆ ಮೆಸ್ಕಾಂ ಇಲಾಖೆಯವರು ಮನೆಗಳ ವಿದ್ಯುತ್ ಬಿಲ್ಲಿನಲ್ಲಿ 3 ತಿಂಗಳ ಬಿಲ್ಲನ್ನು ಒಟ್ಟಿಗೆ ಸೇರಿಸಿ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಗೃಹಬಳಕೆದಾರರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈ ಹೇಳಿದ್ದಾರೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)