ಬಂಟ್ವಾಳ

ಯಾವುದೇ ಪ್ರಚಾರ ಬಯಸದೆ ಅಕೌಂಟಿಗೆ 5 ಸಾವಿರ ರೂ ಹಾಕುವ ಮೂಲಕ ನೆರವು ನೀಡಿದರು

ಜಾಹೀರಾತು

ರಘುನಾಥ ಸೋಮಯಾಜಿ

ಕೊರೊನಾ ಲಾಕ್ ಡೌನ್ ಸಂದರ್ಭ ಹಲವು ವರ್ಗಗಳು ಸಂಕಷ್ಟಕ್ಕೀಡಾಗಿವೆ. ಇವುಗಳಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರೂ ಇದ್ದಾರೆ. ಇಂಥ ಸಂಕಷ್ಟದಲ್ಲಿರುವ ಸುಮಾರು 100 ಮಂದಿಯನ್ನು ಆಯ್ದು ಅವರ ಅಕೌಂಟ್ ಗೆ ತಲಾ 5 ಸಾವಿರ ರೂಗಳನ್ನು ಒದಗಿಸಿ ಉದಾರತೆ ಮೆರೆದವರು ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ಎರಕಳ ಮೂಲದ ಉದ್ಯಮಿ ಎರಕಳ ರಘುನಾಥ ಸೋಮಯಾಜಿ.

ಎರಡು ತಿಂಗಳ ಅವಧಿಯಲ್ಲಿ ಮದುವೆ, ಉಪನಯನದಂಥ ಸಮಾರಂಭಗಳಿದ್ದರೆ ಕೈತುಂಬಾ ಕೆಲಸ ಹೊಂದಿರುತ್ತಿದ್ದ ಈ ವರ್ಗಕ್ಕೆ ಇದೀಗ ನಿರುದ್ಯೋಗ. ಇವರಲ್ಲಿ ಒಪ್ಪೊತ್ತಿನ ಊಟಕ್ಕೂ ತತ್ವಾರ ಎನ್ನುವಂಥ ಪರಿಸ್ಥಿತಿ ಇದೆ. ಕೆಲವು ಕೌಟುಂಬಿಕ ಸಮಸ್ಯೆಗಳಿಂದ ನಷ್ಟವೂ ಅನುಭವಿಸಿದ್ದಾರೆ. ಇಂಥ ಸಂದರ್ಭ ಸ್ಥಳೀಯ ಪ್ರಮುಖರ ಬಳಿ ವಿಚಾರ ವಿಮರ್ಶೆ ನಡೆಸಿದ ರಘುನಾಥ ಸೋಮಯಾಜಿ, ಸಂಕಷ್ಟದಲ್ಲಿರುವ ಅರ್ಚಕರು, ಅರ್ಚಕರ ಸಹಾಯಕರು, ಅಡುಗೆಯವರು, ಅಡುಗೆ ಸಹಾಯಕರ ಪಟ್ಟಿ ಮತ್ತು ಅವರ ಅಕೌಂಟ್ ನಂಬರ್ ಅನ್ನು ಪಡೆದುಕೊಂಡರು. ಇದಕ್ಕಾಗಿ ಯಾವುದೇ ಸಮಾರಂಭವನ್ನೂ ಮಾಡಲಿಲ್ಲ, ಬಳಿಗೆ ಕರೆಸಿಕೊಳ್ಳಲೂ ಇಲ್ಲ, ಫೊಟೋ ಸೆಶನ್ ಕೂಡ ಮಾಡಿಸಲಿಲ್ಲ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಇವರ ಜೀವನಕ್ಕೆ ತೊಂದರೆ ಯಾಗಬಾರದು ಎಂಬ ಉದ್ದೇಶದಿಂದ ಈ ವರ್ಗಕ್ಕೆ ಗೌರವಯುತವಾದ ಬಾಳ್ವೆ ಸಾಗಿಸುವ ಸಲುವಾಗಿ ನೇರ ಅಕೌಂಟ್ ಗೇ ಹಣ ಪಾವತಿಸಿ ಮಾದರಿಯಾಗಿದ್ದಾರೆ ಎಂದು ಅರ್ಚಕ ಸಹಾಯಕ, ಅಡುಗೆ ಸಹಾಯಕ ಕೆಲಸ ಕಾರ್ಯಗಳಿಗೆ ತೆರಳುವವರು ಹೇಳುತ್ತಿದ್ದಾರೆ.

ಮಾದರಿ ಕಾರ್ಯ: ಇವತ್ತು ಅರ್ಚಕರ ಸಹಾಯಕರಾಗಿ, ಅಡುಗೆ ಸಹಾಯಕರಾಗಿ ಹೋಗುವವರನ್ನು ಗುರುತಿಸುವವರು ವಿರಳ. ಆದರೆ ರಘುನಾಥ ಸೋಮಯಾಜಿಯವರು ನಮ್ಮ ಕಷ್ಟಗಳನ್ನು ಗುರುತಿಸಿ, ನಮ್ಮ ಅಕೌಂಟ್ ಗೆ 5 ಸಾವಿರ ರೂಗಳನ್ನು ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಇದೊಂದು ಮಾದರಿ ಕಾರ್ಯ ಎನ್ನುತ್ತಾರೆ ಅರ್ಚಕ ಸಹಾಯಕ ರಾಘವೇಂದ್ರ ಉಪಾಧ್ಯಾಯ.

ಜಾಹೀರಾತು

ಕೊರೊನ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಬ್ರಾಹ್ಮಣ ಸಮಾಜದ 100ಕ್ಕೂ ಅಧಿಕ ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ  5000 ಸಾವಿರ ರೂಪಾಯಿಯನ್ನು ಉದ್ಯಮಿ ಎರಕಳ ರಘುನಾಥ  ಸೋಮಯಾಜಿಯವರು  ವೈಯಕ್ತಿಕವಾಗಿ ನೀಡಿರುತ್ತಾರೆ. ಅವರಿಗೆ ಬ್ರಾಹ್ಮಣ ಸಮಾಜ ಬಾಂದವರ ಪರವಾಗಿ ಅನಂತ ಧನ್ಯವಾದಗಳು ಎನ್ನುತ್ತಾರೆ ಶರತ್ ಕುಮಾರ್.ಬಿ.ಸಿ.ರೋಡ್

ಹೆಚ್ಚಿನ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಲು ಕ್ಲಿಕ್ ಮಾಡಿರಿ

https://chat.whatsapp.com/HEamC5PR5BQ1pNoRgq3yx4

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ