ಲಾಕ್ ಡೌನ್ ನಿಂದಾಗಿ ಸರಿಸುಮಾರು ಎರಡು ತಿಂಗಳಿಂದ ದೇಶದೆಲ್ಲೆಡೆಯಂತೆ ಕರಾವಳಿಯಲ್ಲಿಯೂ ಓಡಾಟ ನಡೆಸುವ ಬಸ್ ಗಳು ರಸ್ತೆಗಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ನಂಬಿ ಬದುಕು ಸಾಗಿಸುವ ಚಾಲಕ, ನಿರ್ವಾಹಕರು ಬೇರೆ ಕೆಲಸ ಮಾಡಲೂ ಆಗದೆ, ಲಾಕ್ ಡೌನ್ ತೆರವಿನ ನಿರೀಕ್ಷೆಯಲ್ಲಿದ್ದಾರೆ.
ಬಹುತೇಕ ಬಸ್ ಮಾಲೀಕರು ದಿನಸಿ ಸಾಮಗ್ರಿಗಳು, ನೆರವು ಒದಗಿಸಿದ್ದರೂ ಭವಿಷ್ಯದಲ್ಲಿ ಕಟ್ಟುಪಾಡುಗಳೊಂದಿಗೆ ಬಸ್ ಓಡಾಟ ನಡೆಸುವ ಸಂದರ್ಭ ಉದ್ಯೋಗದ ಕುರಿತು ಅನಿಶ್ಚಿತ ಸನ್ನಿವೇಶದಲ್ಲಿ ಚಾಲಕ, ನಿರ್ವಾಹಕರಿದ್ದಾರೆ. ಈ ಬಗ್ಗೆ ಬಸ್ ಚಾಲಕ, ನಿರ್ವಾಹಕರ ಕಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಜನಪ್ರತಿನಿಧಿಗಳು ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಲಾಗುತ್ತಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…