ನಮ್ಮೂರು

‘ಉಲ್ಲಾಸ್’ ಐಸ್ ಕ್ರೀಂ, ರೆಸ್ಟೊರೆಂಟ್ ಸೇವೆಗೆ ರೆಡಿ

  • ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ

ಪಾಣೆಮಂಗಳೂರು ಮೇಲ್ಕಾರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಉಲ್ಲಾಸ್ ರೆಸ್ಟೋರೆಂಟ್ ಉತ್ತರ ಮತ್ತು ದಕ್ಷಿಣ ಭಾರತೀಯ ತಿಂಡಿ, ತಿನಸುಗಳಿಗೆ ಪ್ರಸಿದ್ಧ. ಪ್ರವಾಸಿಗರಷ್ಟೇ ಅಲ್ಲ, ಸುತ್ತಮುತ್ತಲಿನವರೆಲ್ಲರೂ ಇಲ್ಲಿರುವ ವಿಶೇಷ ಸಸ್ಯಾಹಾರಿ ಖಾದ್ಯಗಳು, ಐಸ್ ಕ್ರೀಂ ಉತ್ಪನ್ನಗಳನ್ನು ಸೇವಿಸಿ ತೃಪ್ತಿಗೊಂಡು ಹೋದದ್ದಕ್ಕೆ ಲೆಕ್ಕವಿಲ್ಲ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ಕಾರಣ ಉಲ್ಲಾಸ್ ಕೂಡಾ ಬಂದ್ ಆಗಿತ್ತು. ಇದೀಗ ಮೇ.1ರಂದು ರೆಸ್ಟೊರೆಂಟ್ ತೆರೆದಿದೆ. ಆದರೆ ಇಲ್ಲಿ ಬಂದು ತಿಂಡಿ, ತಿನಿಸು, ಉಪಾಹಾರ, ಐಸ್ ಕ್ರೀಂ ಸೇವಿಸಲು ಅವಕಾಶ ಇಲ್ಲ, ಆದರೆ ನಿರಾಶರಾಗಬೇಕಿಲ್ಲ. ಬಂದವರು ಹಾಗೆಯೇ ಮರಳಿ ಹೋಗಬೇಕಿಲ್ಲ. ನೀವು ಮೊದಲೇ ಆರ್ಡರ್ ಮಾಡಿದರೆ ಪಾರ್ಸೆಲ್ ರೆಡಿ ಮಾಡಿ ಇಡುತ್ತೇವೆ. ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವೀಕರಿಸಿ ತೆಗೆದುಕೊಂಡು ಹೋಗಬಹುದು ಎನ್ನುತ್ತಾರೆ ಇದರ ಮಾಲೀಕ ಉದಯ ಪೈ.

ಜಾಹೀರಾತು

8861413011 ದೂರವಾಣಿಯಲ್ಲಿ ಆರ್ಡರ್ ಮಾಡಿದರೆ ಸಾಕಾಗುತ್ತದೆ. ನಮ್ಮಲ್ಲಿ ಐಟಮ್ ಗಳನ್ನ ತಯಾರಿಸಿಕೊಡುತ್ತೇವೆ. ಬೆಳಗ್ಗೆ 8.30ರಿಂದ ರಾತ್ರಿ 7.30 ಗಂಟೆವರೆಗೆ ರೆಸ್ಟಾರೆಂಟ್ ತೆರೆದಿರುತ್ತದೆ. ನಮ್ಮ ಜನಪ್ರಿಯ ಉತ್ಪನ್ನವಾದ ಐಸ್ ಕ್ರೀಂ ಖರೀದಿಗೂ ಇಲ್ಲಿ ಅವಕಾಶವಿದೆ. ಆದರೆ ಆಹಾರ ಸೇವನೆ ಇಲ್ಲ. ಶುಚಿ, ರುಚಿಕಟ್ಟಾದ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್ ತಿನಿಸುಗಳ ಕುರಿತು ನಿಮಗೆ ಗೊತ್ತೇ ಇದೆ. ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಉಂಟು, ಹೋಂ ಡೆಲಿವರಿ ಇಲ್ಲ, ಇಲ್ಲಿಯೇ ಬಂದು ತೆಗೆದುಕೊಂಡು ಹೋಗಬಹುದು. ಈ ಸೇವೆ ಮೇ.1ರಿಂದ ಆರಂಭಗೊಂಡಿದೆ ಎನ್ನುತ್ತಾರೆ ಉದಯ ಪೈ.

ಇದಕ್ಕೆ ನೀವು ಕರೆ ಮಾಡಬೇಕಾದ ಸಂಖ್ಯೆ 8861413011 ಸಮಯ: ಬೆಳಗ್ಗೆ 8.30ರಿಂದ ಸಂಜೆ 7.30.

ullas melkar panemangalore ready to serve you veg food items (NORTH INDIAN AND SOUTHINDIAN FOOD) you will only get parcel . Time (8:30am to 7:30pm) .contact:8861413011

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

9 hours ago