ಬಂಟ್ವಾಳ

ಕೊರೊನಾ ಸೋಂಕು ಹೆಚ್ಚಳ: ಬಂಟ್ವಾಳದಲ್ಲಿ ನಿರ್ಬಂಧ ಕಟ್ಟುನಿಟ್ಟು

ಬಂಟ್ವಾಳದಲ್ಲಿ ಮತ್ತೋರ್ವ ಮಹಿಳೆಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ತಯಾರಾಗುತ್ತಿದೆ. ಭಾನುವಾರ ಮಹಿಳೆ ಮೃತಪಟ್ಟ ಬಳಿಕ ಬಂಟ್ವಾಳದ ಅವರ ಮನೆಯ ಸುಮಾರು 100 ಮೀ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿ ಸೀಲ್ ಡೌನ್ ಮಾಡಲಾಗಿತ್ತು. ಸೋಮವಾರದಿಂದ ಇದು ಜಾರಿಗೆ ಬಂದಿದ್ದು, 28 ದಿನಗಳ ಕಾಲ ಈ ನಿರ್ಬಂಧವನ್ನು ಮಾಡುವುದಾಗಿ ತಿಳಿಸಲಾಗಿತ್ತು. ಮಂಗಳವಾರ ಮತ್ತೊಂದು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೊಂದು ದಿನ ಇದು ವಿಸ್ತರಣೆ ಆಗಲಿದೆ ಎಂದು ಇದಕ್ಕೆ ಸಂಬಂಧಿಸಿದ ಮೇಲುಸ್ತುವಾರಿಯನ್ನು ನೋಡುತ್ತಿರುವ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಸಭೆಯೊಂದನ್ನು ನಡೆಸಲಾಗಿದ್ದು, ಪುರಸಭೆ, ಪೊಲೀಸ್, ಆರೋಗ್ಯ ಇಲಾಖೆಗಳ ಸಹಿತ ತಂಡವೊಂದನ್ನು ರೂಪಿಸಲಾಗಿದ್ದು, ನಿರ್ಬಂಧಿತ ಮನೆಯವರಿಗೆ ಈ ಕುರಿತು ಮಾಹಿತಿಗಳನ್ನು ಸದ್ಯದಲ್ಲೇ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಜಾಹೀರಾತು

ಪುರಸಭೆ ಕಂಟ್ರೋಲ್ ರೂಮ್ ಗೆ ಕರೆ: ಈಗಾಗಲೇ ಪುರಸಭೆಯ ಕಂಟ್ರೋಲ್ ರೂಂ ಗೆ ಕರೆಗಳು ಬರುತ್ತಿವೆ. ಕಂಟ್ರೋಲ್ ರೂಮ್  ನಿಂದ 24 ತಾಸು ಸೇವೆ ನೀಡಲಾಗುತ್ತಿದೆ  ಈಗಾಗಲೇ ಕಂಟೈನ್ಮೆಂಟ್ ವಲಯದ 180 ಮನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದ್ದಾರೆ. ಪುರಸಭೆ ಕಂಟ್ರೋಲ್ ರೂಂ ನಂಬರ್ ಹೀಗಿದೆ – 08255233130

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ