ಕೊರೋನಾ ( COVID 19) ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ಫರಂಗಿಪೇಟೆ ಬಸ್ ಸ್ಟ್ಯಾಂಡ್ ನಲ್ಲಿ ಕೈಯಿಂದ ಮುಟ್ಟದೇ ಸ್ಯಾನಿಟೈಸರ್ ಉಪಯೋಗಿಸುವ ದೇಸಿ ತಂತ್ರಜ್ಞಾನದ ನಿರ್ಮಲೀಕಾರಕ ಉಪಕರಣವನ್ನು ಸಾರ್ವಜನಿಕ ಉಪಯೋಗಕ್ಕಾಗಿ ನಿಯೋಜಿಸಲಾಯಿತು.
ಸಾರ್ವಜನಿಕರ ಅನುಕೂಲಕ್ಕೋಸ್ಕರ ದೇಸಿ ಶೈಲಿಯಲ್ಲಿ ಸ್ಟ್ಯಾಂಡ್ ಮಾಡಿ ಈ ರಚನೆಯನ್ನು ನಿರ್ಮಿಸಿದವರು ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ ಪೂಂಜಾ ಅವರ ಪುತ್ರ ಅರ್ಜುನ್ ಕೆ. ಪೂಂಜ. ಸಾರ್ವಜನಿಕ ಉಪಯೋಗಕ್ಕಾಗಿ ಹಾಗೂ ಅನುಕೂಲಕ್ಕಾಗಿ ಬಸ್ ನಿಲ್ದಾಣದಲ್ಲಿ ಇದನ್ನು ಅಳವಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)