ಸರ್ಕಾರಿ ಮಾಹಿತಿ

ರೇಷನ್ ಸಮಸ್ಯೆಯೇ? ಈ ನಂಬರ್ ಗೆ ದೂರು ನೀಡಬಹುದು

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ (ಮಧ್ಯಾಹ್ನ ಊಟದ ವಿರಾಮ 1.30 ಗಂಟೆಯಿಂದ 2.30 ಗಂಟೆವರೆಗೆ ಹೊರತುಪಡಿಸಿ) ಪಡಿತರ ಪಡೆಯಬಹುದಾಗಿದೆ.

ಜಾಹೀರಾತು

ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ತೂಕದಲ್ಲಿ ಕಡಿಮೆ ಕೊಟ್ಟಲ್ಲಿ, ಹಣ ಕೇಳಿದಲ್ಲಿ ಪಡಿತರ ಜೊತೆಗೆ ವಸ್ತುಗಳನ್ನು ಕಡ್ಡಾಯವಾಗಿ ಕೊಳ್ಳುವಂತೆ ಒತ್ತಾಯಿಸಿದಲ್ಲಿ, ಪಡಿತರ ವಿತರಣೆ ನಿರಾಕರಿಸಿದಲ್ಲಿ, ಪಡಿತರ ಚೀಟಿಯ ಬಗ್ಗೆ ಹಾಗೂ ವಿತರಣೆ ಬಗ್ಗೆ ಏನಾದರೂ ಸಮಸ್ಯೆ ಇದ್ದಲ್ಲಿ ಮತ್ತು ಪಡಿತರ ಲಭ್ಯತೆ ಹಾಗೂ ಗುಣಮಟ್ಟದಲ್ಲಿ ಏನಾದರೂ ಕೊರತೆಯಿದ್ದಲ್ಲಿ ಈ ಕೆಳಗಿನ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

  • ಮಂಗಳೂರು ನಗರ – ಸಹಾಯಕ ನಿರ್ದೇಶಕರು , ಕಸ್ತೂರಿ  ಆಹಾರ ನಿರೀಕ್ಷಕರು,  ರಫೀಕ್ ಎಂ, ದೂರವಾಣಿ ಸಂಖ್ಯೆ :0824-2423622,
  • ಮಂಗಳೂರು ಗ್ರಾಮಾಂತರ – ಆಹಾರ ಶಿರಸ್ತೇದಾರರು ಮೋಹಿನಿ  ಕುಮಾರಿ, ಆಹಾರ ನಿರೀಕ್ಷಕರು ರಾಜಶ್ರೀ,  ದೂರವಾಣಿ ಸಂಖ್ಯೆ : 0824-2412033,
  • ಬಂಟ್ವಾಳ ತಾಲೂಕು–ಆಹಾರ ಶಿರಸ್ತೇದಾರರು ಶ್ರೀನಿವಾಸ್  ದೂರವಾಣಿ ಸಂಖ್ಯೆ: 08255-232125,
  • ಬೆಳ್ತಂಗಡಿ ತಾಲೂಕು – ಆಹಾರ ನಿರೀಕ್ಷಕರು, ವಿಶ್ವ .ಕೆ, ದೂರವಾಣಿ ಸಂಖ್ಯೆ : 08256-232383,
  • ಪುತ್ತೂರು ತಾಲೂಕು–ಆಹಾರ ನಿರೀಕ್ಷಕರು, ಸರಸ್ವತಿ ಕೆ.  ದೂರವಾಣಿ ಸಂಖ್ಯೆ : 08251-231349,
  • ಸುಳ್ಯ ತಾಲೂಕು – ಆಹಾರ ಶಿರಸ್ತೇದಾರರು ಕಮಲ, ಆಹಾರ ನಿರೀಕ್ಷಕರರು, ವಸಂತಿ ದೂರವಾಣಿ ಸಂಖ್ಯೆ : 08257-231330

ಇವರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

7 hours ago