ಬಂಟ್ವಾಳನ್ಯೂಸ್, ಸಂಪಾದಕ: ಹರೀಶ ಮಾಂಬಾಡಿ
ನಗರದ ಶುಚಿತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ರೋಟರಿ ಕ್ಲಬ್ ಬಂಟ್ವಾಳ ಹಾಗೂ ವಿ.ಐ.ಎಸ್ .ನೆಟ್ ವಕ್೯ ಬೆಂಗಳೂರು ಅವರ ಸಹಕಾರದಲ್ಲಿ ದಿನಬಳಕೆ ಸಾಮಾಗ್ರಿಗಳ ಕಿಟ್,ಹಣ್ಣು,ಮಾಸ್ಕ್ ನ್ನು ಮಂಗಳವಾರ ಪುರಸಭಾ ವಠಾರದಲ್ಲಿ ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಿ ಬಾಳಿಗಾ, ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ್, ಹರೀಶ್ ಬಾಳಿಗಾ ಬಂಟ್ವಾಳ, ಪುರಸಭಾ ಸದಸ್ಯ ಗೋವಿಂದಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ವಿ.ಐ.ಎಸ್ .ನೆಟ್ ವಕ್೯ನ ಸಿ.ಇ.ಒ ಉಮಾಶಂಕರ್ ಬೆಂಗಳೂರು, ಶ್ರೀನಾಥ ಶೆಣ್ಯೆ ಮೊದಲಾದವರಿದ್ದರು. ಇದೇ ವೇಳೆ ನಾನಾ ಸಂಘಟನೆಗಳ ಸಹಕಾರದಲ್ಲಿ ಬಂಟ್ವಾಳ ಪೇಟೆಯಲ್ಲಿ ರಾಸಾಯನಿಕ ಸಿಂಪಡಣಾ ಕಾರ್ಯ ನಡೆಯಿತು.