ಕಲ್ಲಡ್ಕ

ಜನತಾ ಕರ್ಫ್ಯೂ – ಸೂರಿಕುಮೇರು ಚರ್ಚ್ ಸಂಪೂರ್ಣ ಬಂದ್

ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಜನತಾ ಕರೆ‌ ಬೆಂಬಲಿಸಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶದಂತೆ ಸೂರಿಕುಮೇರಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಭಾನುವಾರ ಚಟುವಟಿಕೆಗಳು ನಡೆಯಲಿಲ್ಲ.

ಜಾಹೀರಾತು

ಚರ್ಚ್ ಪ್ರವೇಶ ದ್ವಾರದಲ್ಲಿರುವ ಗೇಟನ್ನು ಮುಚ್ಚುವ ಮೂಲಕ ವಂದನೀಯ ಫಾದರ್ ಗ್ರೆಗರಿ ಪಿರೇರಾ, ಚರ್ಚ್ ಪಾಲನಾ ಸಮಿತಿ ಮತ್ತು ಸಮಸ್ತ ಕ್ರೈಸ್ತ ಬಾಂಧವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಸೂರಿಕುಮೇರು ಬೊರಿಮಾರ್ ಚರ್ಚ್ ನ 126 ವರ್ಷದ ಇತಿಹಾಸದಲ್ಲಿ ಇದೇ  ಮೊದಲ ಬಾರಿಗೆ ದಿವ್ಯ ಬಲಿಪೂಜೆಯು ನಡೆದಿರುವುದಿಲ್ಲ, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು  ಅಭಿನಂದಿಸಲು ಭಾನುವಾರ ಸಂಜೆ 5:00 ಗಂಟೆಗೆ ಸರಿಯಾಗಿ ಚರ್ಚ್ ಗಂಟೆಯನ್ನು ಬಾರಿಸಲಾಗುತ್ತದೆ ಎಂದು ಹೇಳಿರುವ ಫಾ.ಗ್ರೆಗರಿ ಪಿರೇರಾ, ಮಾರ್ಚ್ 31 ರ ತನಕ ಯಾವುದೇ ಕಾರ್ಯಕ್ರಮಗಳು, ಇತರ ಚಟುವಟಿಕೆಗಳು ಚರ್ಚ್ ಆವರಣದಲ್ಲಿ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಬಂಟ್ವಾಳನ್ಯೂಸ್, ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ