ಬಂಟ್ವಾಳ ತಾಲೂಕಿನ ಎಲ್ಲ ಚರ್ಚ್ ಗಳ ಸಹಿತ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳೂ ಭಾನುವಾರ ಬಂದ್ ಆಗಿದ್ದವು.
ಜನತಾ ಕರ್ಫ್ಯೂಗೆ ಸಂಬಂಧಪಟ್ಟಂತೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ಧರ್ಮಪ್ರಾಂತ್ಯದ 124 ಚರ್ಚ್ ಗಳಲ್ಲಿ ಭಾನುವಾರ ಸಂಜೆ 5ಕ್ಕೆ ಏಕಕಾಲದಲ್ಲಿ ಚರ್ಚ್ ಗಂಟೆ ಬಾರಿಸುವ ಮೂಲಕ ಕೊರೊನಾ ವೈರಸ್ ಭಯದ ವಾತಾವರಣದ ನಡುವೆ ರೋಗಿಗಳ ಪರವಾಗಿ ಸೇವೆ ಸಲ್ಲಿಸುವ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸೇವೆ ಸಲ್ಲಿಸುತ್ತಿರುವ ಮಂದಿಯ ಕೆಲಸ ಸ್ಮರಿಸಲಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸದ ಜೊತೆಗೆ ಏರ್ ಲೈನ್ಸ್ ಮತ್ತು ಸಂಚಾರ ವ್ಯವಸ್ಥೆಯಲ್ಲೂ ಕೆಲಸ ಮಾಡುವವರ ಕೆಲಸವನ್ನು ಸ್ಮರಿಸಲಾಗುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…